ಬೆಂಗಳೂರು: ಎಎಸ್‌ಸಿ ಬಾಯ್ಸ ತಂಡದವರು ಕೆಎಸ್‌ಎಚ್‌ಎ ಆಶ್ರಯದ ರಾಜ್ಯ `ಎ' ಡಿವಿಷನ್ ಹಾಕಿ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.
ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಎಎಸ್‌ಸಿ ತಂಡ 2-0 ಗೋಲುಗಳಿಂದ ಎಂಇಜಿ ಬಾಯ್ಸ ತಂಡವನ್ನು ಮಣಿಸಿತು. ಸಂಜಿತ್ ಟೊಪ್ಪೊ (19ನೇ ನಿಮಿಷ) ಮತ್ತು ವಿಕಾಸ್ ಗುರಿಯಾ (43) ಅವರು ವಿಜಯಿ ತಂಡದ ಪರ ಗೋಲು ಗಳಿಸಿದರು.
ದಿನದ ಮೊದಲ ಪಂದ್ಯದಲ್ಲಿ ಎಸ್‌ಎಐ `ಬಿ' ತಂಡ 6-1 ಗೋಲುಗಳಿಂದ ಪೋಸ್ಟಲ್ ವಿರುದ್ಧ ಸುಲಭ ಜಯ ದಾಖಲಿಸಿತು.
ಹ್ಯಾಟ್ರಿಕ್ ಒಳಗೊಂಡಂತೆ ಐದು ಗೋಲುಗಳನ್ನು ತಂದಿತ್ತ ಪಿ.ಎಲ್. ತಿಮ್ಮಣ್ಣ ಎಸ್‌ಎಐ `ಬಿ' ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಅವರು ಪಂದ್ಯದ 29, 30, 50, 53 ಹಾಗೂ 57ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ಸೇರಿಸಿದರು.
ಮತ್ತೊಂದು ಗೋಲನ್ನು ಪಿ.ಆರ್. ಅಯ್ಯಪ್ಪ 20ನೇ ನಿಮಿಷದಲ್ಲಿ ಗಳಿಸಿದರು. ಪೋಸ್ಟಲ್ ತಂಡದ ಏಕೈಕ ಗೋಲನ್ನು ಸ್ಯಾಮುಯೆಲ್ ನಿರಂಜನ್ (47ನೇ ನಿಮಿಷ) ತಂದಿತ್ತರು.
ಶುಕ್ರವಾರ ವಿರಾಮದ ದಿನವಾಗಿದ್ದು, ಶನಿವಾರ ನಡೆಯುವ ಪಂದ್ಯಗಳಲ್ಲಿ ಪೋಸ್ಟಲ್- ಎಎಸ್‌ಸಿ ಬಾಯ್ಸ ಮತ್ತು ಎಸ್‌ಎಐ `ಬಿ'- ಎಂಇಜಿ ಬಾಯ್ಸ ತಂಡಗಳು ಪೈಪೋಟಿ ನಡೆಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.