ADVERTISEMENT

ಹಾಕಿ: ಭಾರತ ಮಹಿಳೆಯರಿಗೆ ಜಯ

ಪಿಟಿಐ
Published 16 ಜೂನ್ 2018, 19:39 IST
Last Updated 16 ಜೂನ್ 2018, 19:39 IST
ಗೋಲು ಗಳಿಸಿದ ಭಾರತ ತಂಡದ ಆಟಗಾರ್ತಿ ಉದಿತಾ ಅವರು ಸಹ ಆಟಗಾರ್ತಿಯರ ಜೊತಗೆ ಸಂಭ್ರಮಿಸಿದರು ಪಿಟಿಐ ಚಿತ್ರ
ಗೋಲು ಗಳಿಸಿದ ಭಾರತ ತಂಡದ ಆಟಗಾರ್ತಿ ಉದಿತಾ ಅವರು ಸಹ ಆಟಗಾರ್ತಿಯರ ಜೊತಗೆ ಸಂಭ್ರಮಿಸಿದರು ಪಿಟಿಐ ಚಿತ್ರ   

ಮ್ಯಾಡ್ರಿಡ್: ನಾಯಕಿ ರಾಣಿ ರಾಮಪಾಲ್ ಅವರ ಅಮೋಘ ಆಟದ ಬಲದಿಂದ ಭಾರತ ಮಹಿಳೆಯರ ತಂಡವು ಇಲ್ಲಿ ನಡೆಯುತ್ತಿರುವ ಮಹಿಳಾ ಹಾಕಿ ಸರಣಿಯಲ್ಲಿ ಸ್ಪೇನ್ ಎದುರು ಜಯಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 3–2 ಗೋಲುಗಳ ರೋಚಕ ಜಯ ಸಾಧಿಸಿತು.  ಇದ ರೊಂದಿಗೆ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಮೊದಲ ಪಂದ್ಯದಲ್ಲಿ ಸ್ಪೇನ್ ತಂಡವು 3–0ಯಿಂದ ಭಾರತ ತಂಡವನ್ನು ಸೋಲಿಸಿತ್ತು. ಎರಡನೇ ಪಂದ್ಯವು 1–1ರಲ್ಲಿ ಡ್ರಾ ಆಗಿತ್ತು.

ADVERTISEMENT

ಡಿಪೋರ್ಟರ್ಸ್ ಹಾಕಿ ಕ್ರೀಡಾಂಗ ಣದಲ್ಲಿ ನಡೆದ ನಾಲ್ಕನೇ ಪಂದ್ಯದ ಮೂರನೇ ನಿಮಿಷದಲ್ಲಿ ಸ್ಪೇನ್ ತಂಡದ ಮಾರಿಯಾ ಲೋಪೆಜ್ ಗೋಲು ಹೊಡೆದರು. 28ನೇ ನಿಮಿಷದಲ್ಲಿ ಭಾರತದ ಗುರ್ಜಿತ್ ಕೌರ್ ಗೋಲು ಹೊಡೆದರು. ಇದರೊಂದಿಗೆ 1–1ರ ಸಮಬಲವಾಯಿತು. 32ನೇ ನಿಮಿಷದಲ್ಲಿ ಸ್ಟ್ರೈಕರ್ ಲಾಲ್‌ರೆಮಸಿಯಾಮಿ ಗೋಲು ಹೊಡೆದು ತಂಡಕ್ಕೆ 2–1ರ ಮುನ್ನಡೆ ನೀಡಿದರು.

200ನೇ ಪಂದ್ಯ ಆಡುತ್ತಿರುವ ವಂದನಾ ಕಟಾರಿಯಾ ಅವರು 42ನೇ ನಿಮಿಷದಲ್ಲಿ ಲಭಿಸಿದ್ದ ಅವಕಾಶವನ್ನು ಕೈಚೆಲ್ಲಿದರು. ಕೆಲವೇ ನಿಮಿಷಗಳ ನಂತರ ಸ್ಪೇನ್ ತಂಡದ ಲೋಲಾ ರೀರಾ ಅವರು ಗೋಲು ಹೊಡೆದು 2–2ರ ಸಮಬಲಕ್ಕೆ ಕಾರಣರಾದರು. ಕೊನೆಯ ನಿಮಿಷದಲ್ಲಿ ರಾಣಿ ರಾಮಪಾಲ್ ಹೊಡೆದ ಗೋಲಿನಿಂದ ಭಾರತ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.