ಬೆಳಗಾವಿ: ಮೈಸೂರು, ಕೊಲ್ಲಾಪುರ, ನೂಲ್ ತಂಡಗಳು ನಗರದ ಲೇಲೇ ಮೈದಾನದಲ್ಲಿ ಬೆಳಗಾವಿ ಮಹಿಳಾ ಹಾಕಿ ಸಂಘದ ಆಶ್ರಯದಲ್ಲಿ ಒಲಿಂಪಿಯನ್ ಬಂಡು ಪಾಟೀಲ ಸ್ಮರಣಾರ್ಥ ಮಂಗಳವಾರ ನಡೆದ ರಾಷ್ಟ್ರ ಮಟ್ಟದ ಮಹಿಳಾ ಹಾಕಿ ಟೂರ್ನಿಯ ಪಂದ್ಯಗಳಲ್ಲಿ ಗೆಲುವು ಸಾಧಿಸಿದವು.
ಮೊದಲ ಪಂದ್ಯದಲ್ಲಿ ಕೊಲ್ಲಾಪುರ ತಂಡ 3-1ರಿಂದ ನಾಸಿಕ್ ತಂಡವನ್ನು ಮಣಿಸಿತು. ಇನ್ನುಳಿದ ಪಂದ್ಯಗಳಲ್ಲಿ ನೂಲ್ (ಗಡಿಗ್ಲಜ್) ತಂಡವು ಸೊಲ್ಲಾಪುರ ತಂಡವನ್ನು 7-0ರಲ್ಲೂ, ಮೈಸೂರಿನ ಡಿವೈಎಸ್ಎಸ್ ತಂಡವು ಭೋಪಾಲ್ ಸಾಯಿ ತಂಡವನ್ನು 3-1ರಲ್ಲೂ ಸೋಲಿಸಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.