ADVERTISEMENT

ಹೆನ್ರಿಯೆಟಾಗೆ ಚಿನ್ನದ ಪದಕ

ಏಜೆನ್ಸೀಸ್
Published 10 ಮಾರ್ಚ್ 2018, 20:28 IST
Last Updated 10 ಮಾರ್ಚ್ 2018, 20:28 IST
ಹೆನ್ರಿಯೆಟಾಗೆ ಚಿನ್ನದ ಪದಕ
ಹೆನ್ರಿಯೆಟಾಗೆ ಚಿನ್ನದ ಪದಕ   

ಪೈವೊಂಗ್‌ಚಾಂಗ್‌, ದಕ್ಷಿಣ ಕೊರಿಯಾ: ಸ್ಲೊವೇಕಿಯಾದ ಸ್ಕೀಯಿಂಗ್‌ ಪಟು ಹೆನ್ರಿಯೆಟಾ ಫರ್ಕಾಸೊವಾ, ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ ಗೆದ್ದ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

ಜಿಯೊಂಗ್‌ಸೆಯೊನ್‌ ಅಲ್ಪೈನ್ ಕೇಂದ್ರದಲ್ಲಿ ಶನಿವಾರ ನಡೆದ ದೃಷ್ಟಿದೋಷ ಹೊಂದಿರುವ ಮಹಿಳೆಯರ ಡೌನ್‌ಹಿಲ್‌ ವಿಭಾಗದ ಸ್ಪರ್ಧೆಯಲ್ಲಿ ಫರ್ಕಾಸೊವಾ 1 ನಿಮಿಷ 29.72 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟಾರೆ ಆರನೇ ಚಿನ್ನ ಜಯಿಸಿದ ಹಿರಿಮೆಗೂ ಪಾತ್ರರಾದರು.

ಬ್ರಿಟನ್‌ನ ಮಿಲ್ಲಿ ನೈಟ್‌ ಮತ್ತು ಬೆಲ್ಜಿಯಂನ ಎಲೆವೊನೊರ್‌ ಸನಾ ಅವರು ಕ್ರಮವಾಗಿ ಈ ವಿಭಾಗದ ಬೆಳ್ಳಿ ಮತ್ತು ಕಂಚು ಗೆದ್ದರು.

ADVERTISEMENT

ಪುರುಷರ ಅಲ್ಪೈನ್‌ ಸ್ಕೀಯಿಂಗ್‌ ಡೌನ್‌ ಹಿಲ್‌ (ಕುಳಿತು) ಸ್ಪರ್ಧೆಯ ಚಿನ್ನ ಅಮೆರಿಕದ ಆ್ಯಂಡ್ರ್ಯೂ ಕುರ್ಕಾ ಅವರ ಪಾಲಾಯಿತು. ಜಪಾನ್‌ನ ತೈಕಿ ಮೊರಿ ಬೆಳ್ಳಿ ಗೆದ್ದರೆ, ನ್ಯೂಜಿಲೆಂಡ್‌ನ ಕೋರಿ ಪೀಟರ್ಸ್‌ ಕಂಚಿಗೆ ಕೊರಳೊಡ್ಡಿದರು.

ಪುರುಷರ ಡೌನ್‌ಹಿಲ್‌ (ನಿಂತುಕೊಂಡು) ವಿಭಾಗದಲ್ಲಿ ಸ್ವಿಟ್ಜರ್‌ಲೆಂಡ್‌ನ ಥಿಯೊ ಗಿಮುರ್‌ ಚಿನ್ನ ಜಯಿಸಿದರು. ಫ್ರಾನ್ಸ್‌ನ ಆರ್ಥರ್‌ ಬೌಚೆಟ್‌ ಮತ್ತು ಆಸ್ಟ್ರಿಯಾದ ಮಾರ್ಕಸ್‌ ಸಲಚರ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ಮಹಿಳೆಯರ ಡೌನ್‌ಹಿಲ್‌ನಲ್ಲಿ (ಕುಳಿತು) ಜರ್ಮನಿಯ ಅನಾ ಶಾಫೆಲ್‌ಹುಬರ್‌ ಚಿನ್ನಕ್ಕೆ ಮುತ್ತಿಕ್ಕಿದರು. ಜಪಾನ್‌ನ ಮೊಮೊಕಾ ಮುರಾವೊಕಾ ಬೆಳ್ಳಿ ಜಯಿಸಿದರು. ಅಮೆರಿಕದ ಲೌರೀ ಸ್ಟೀಫನ್ಸ್‌ ಕಂಚು ಗೆದ್ದರು.

ಮಹಿಳೆಯರ ಡೌನ್‌ಹಿಲ್‌ (ನಿಂತುಕೊಂಡು) ಸ್ಪರ್ಧೆಯಲ್ಲಿ ಫ್ರಾನ್ಸ್‌ನ ಮೇರಿ ಬೊಚೆಟ್‌ ಚಿನ್ನ ಜಯಿಸಿದರು.

ಪುರುಷರ 7.5 ಕಿಲೊ ಮೀಟರ್ಸ್‌ ಬಿಯಾಥ್ಲಾನ್‌ (ಕುಳಿತು) ವಿಭಾಗದಲ್ಲಿ ಅಮೆರಿಕದ ಡೇನಿಯಲ್‌ ಸಿನೊಸೆನ್‌ ಚಿನ್ನ ಗೆದ್ದರು. ಬೆಲಾರಸ್‌ನ ಡಿಮಿಟ್ರಿ ಲೋಬನ್‌ ಮತ್ತು ಕೆನಡಾದ ಕಾಲಿನ್‌ ಕ್ಯಾಮರಾನ್‌ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿಗೆ ಕೊರಳೊಡ್ಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.