ADVERTISEMENT

‘ಕ್ರೀಡಾ ಸಚಿವಾಲಯದ ಮಹತ್ವ ಹೆಚ್ಚಿಸುವೆ’

ಸರ್ವಾನಂದ ಸೋನೊವಾಲ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಮೇ 2014, 19:30 IST
Last Updated 27 ಮೇ 2014, 19:30 IST
ಸರ್ವಾನಂದ ಸೋನೊವಾಲ್‌
ಸರ್ವಾನಂದ ಸೋನೊವಾಲ್‌   

ನವದೆಹಲಿ (ಪಿಟಿಐ): ಕ್ರೀಡಾ ಸಚಿವಾಲಯದ ಮಹತ್ವವನ್ನು ಸಾರುವ ಮೂಲಕ ಗೋಚರ ಶಕ್ತಿಯ ನ್ನಾಗಿ ರೂಪಿಸಲು ಶ್ರಮಿಸುವುದಾಗಿ ನೂತನ ಕ್ರೀಡಾ ಸಚಿವ ಸರ್ವಾನಂದ ಸೋನೊವಾಲ್‌ ಭರವಸೆ ನೀಡಿದರು.

ಮಂಗಳವಾರ ಕ್ರೀಡಾ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕ್ರೀಡಾ ಸಚಿವನಾಗಿ ಇಂದು ನನ್ನ ಮೊದಲ ದಿನ. ನನಗೆ ಮಾಧ್ಯಮ ಹಾಗೂ ದೇಶದ ಜನರ ಬೆಂಬಲ ಬೇಕು. ತಜ್ಞರು ಹಾಗೂ ಕ್ರೀಡಾ ಪರಿಣತರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡುವೆ’ ಎಂದರು.

‘ದೇಶದಿಂದ ಉತ್ತಮ ಕ್ರೀಡಾಪಟು ಗಳು ಹೊರಹೊಮ್ಮ ಬೇಕು. ಏನು ಮಾಡಬೇಕು ಎಂಬುದರ ರೂಪುರೇಷೆಗಳ ಬಗ್ಗೆ ಮತ್ತೊಂದು ದಿನ ಮಾಧ್ಯಮದ ಎದುರು ವಿವರಿಸುತ್ತೇನೆ. ಅದಕ್ಕೂ ಮೊದಲು ನಾನು ಕ್ರೀಡಾ ಪರಿಣತರು ಹಾಗೂ ಕ್ರೀಡಾಪಟುಗಳೊಂದಿಗೆ ಸಮಾ ಲೋಚನೆ ನಡೆಸಬೇಕು. ಆಗ ನನ್ನ ಜವಾಬ್ದಾರಿಯನ್ನು ಅಚ್ಚು ಕಟ್ಟಾಗಿ ನಿಭಾಯಿಸಲು ಸಾಧ್ಯವಾಗುತ್ತದೆ’ ಎಂದು ಅವರು ತಿಳಿಸಿದರು.

ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ನಡುವಿನ ಭೇಟಿಯಿಂದಾಗಿ ಉಭಯ ದೇಶಗಳ ಕ್ರೀಡಾ ಬಾಂಧವ್ಯ ವೃದ್ಧಿಯಾಗುವುದೇ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು. ‘ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವುದಕ್ಕೆ ನಮ್ಮ ಆದ್ಯತೆ ಇದ್ದೇ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.