ADVERTISEMENT

‘ನನ್ನನ್ನು ಹೊರದಬ್ಬಲು ಸಾಧ್ಯವಿಲ್ಲ’

ಸ್ಪರ್ಧೆ ಖಚಿತ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST
ಎನ್‌.ಶ್ರೀನಿವಾಸನ್‌
ಎನ್‌.ಶ್ರೀನಿವಾಸನ್‌   

ಚೆನ್ನೈ (ಪಿಟಿಐ): ಐಪಿಎಲ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀ ಸರು ಸಲ್ಲಿಸಿರುವ ಆರೋಪ ಪಟ್ಟಿ ಯಲ್ಲಿ ಗುರುನಾಥ್‌ ಮೇಯಪ್ಪನ್‌ ಹೆಸರು ಕಾಣಿಸಿಕೊಂಡಿ ರುವುದು ಬಿಸಿಸಿಐ ಅಧ್ಯಕ್ಷ (ಅಧಿಕಾರರಹಿತ) ಎನ್‌. ಶ್ರೀನಿವಾಸನ್‌ಗೆ ಹಿನ್ನಡೆ ಉಂಟುಮಾಡಿದೆ.

ಆದರೆ ತಾನು ಸುಲಭದಲ್ಲಿ ತಲೆ ಬಾಗಲು ಸಿದ್ಧನಿಲ್ಲ ಎಂದು ಶ್ರೀನಿವಾ ಸನ್‌ ಮತ್ತೊಮ್ಮೆ ಸ್ಪಷ್ಟಪಡಿಸಿ ದ್ದಾರೆ. ಅಳಿಯ ಮೇಯಪ್ಪನ್‌ ಅವರನ್ನು ಮತ್ತಷ್ಟು ದೂರವಿಡಲು ಪ್ರಯತ್ನಿಸಿ ರುವ ಶ್ರೀನಿವಾಸನ್‌, ‘ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನನ್ನ ನಿರ್ಧಾರ ದಲ್ಲಿ ಯಾವುದೇ ಬದಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಮೇಯಪ್ಪನ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರುವ ಕಾರಣ ಮಂಡಳಿ ಯಿಂದ ದೂರ ಸರಿಯುತ್ತೀರಾ ಎಂಬ ಪ್ರಶ್ನೆ ಎದುರಾದಾಗ, ‘ನಾನು ಏಕೆ ರಾಜೀನಾಮೆ ನೀಡಬೇಕು? ನಾನು ಅನರ್ಹಗೊಂಡಿಲ್ಲ. ನಿಮಗೆ ನನ್ನನ್ನು ಹೊರದಬ್ಬಲು ಸಾಧ್ಯವಿಲ್ಲ’ ಎಂದು ಉತ್ತರಿಸಿದ್ದಾರೆ.

‘ಗುರುನಾಥನ್‌ ತಪ್ಪು ಮಾಡಿದ್ದರೆ, ಕಾನೂನಿನ ಪ್ರಕಾರ ಶಿಕ್ಷೆ ಅನುಭವಿಸು ವರು. ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಕ್ರಿಕೆಟ್‌ ಜೊತೆ ಈಗ ಯಾವುದೇ ಸಂಬಂಧ ಇಲ್ಲ. ಆದರೆ ನಾನು ಅನರ್ಹಗೊಂಡಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮಗಳು ಏನೆಲ್ಲಾ ಹೇಳುತ್ತವೆ’ ಎಂದಿದ್ದಾರೆ.

‘ಸೆ. 29 ರಂದು ನಡೆಯುವ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವೆ. ಚುನಾವಣೆಯಲ್ಲೂ ಸ್ಪರ್ಧಿಸುವೆ’ ಎಂದು ಶ್ರೀನಿವಾಸನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.