ADVERTISEMENT

28ರಿಂದ ಅಖಿಲ ಭಾರತ ಚೆಸ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಮಂಗಳೂರು: ಯುನೈಟೆಡ್ ಕರ್ನಾಟಕ ಚೆಸ್ ಅಸೋಸಿಯೇಷನ್ ವತಿಯಿಂದ ಇದೇ 28 ರಿಂದ ಮೇ 2ರವರೆಗೆ  ಕೊಡಿಯಾಲಬೈಲಿನ ಸುಬ್ರಹ್ಮಣ್ಯ ಸಭಾದಲ್ಲಿ ಯುಕೆಸಿಎ ಕಪ್ ಅಖಿಲ ಭಾರತ ಓಪನ್ ಫಿಡೆ ರೇಟೆಡ್ ಚೆಸ್ ಟೂರ್ನಿ ನಡೆಯಲಿದೆ.

ಒಟ್ಟು ಎರಡು ಲಕ್ಷ ರೂಪಾಯಿ ಬಹುಮಾನ ಹಣ ಹೊಂದಿದ್ದು, ಅದರಲ್ಲಿ 65 ಬಹುಮಾನಗಳಿವೆ. ಕರ್ನಾಟಕ ಮತ್ತು ತಮಿಳುನಾಡಿನ ಕೆಲವು ಇಂಟರ್‌ನ್ಯಾಷನಲ್ ಮಾಸ್ಟರ್ ಆಟಗಾರರು, ಡಬ್ಲ್ಯುಜಿಎಂ ಭಾಗ್ಯಶ್ರೀ ತಿಪ್ಸೆ ಭಾಗವಹಿಸುವರು ಎಂದು ಅಸೋಸಿಯೇಷನ್ ಅಧ್ಯಕ್ಷ ಎಂ.ಎಸ್. ಗುರುರಾಜ್ ತಿಳಿಸಿದರು.

ಹೆಸರು ನೊಂದಾಯಿಸಲು ಕೊನೆಯ ದಿನ ಏ. 25. ಯುಕೆಸಿಎ ಕಾರ್ಯದರ್ಶಿ ವಿ.ರಾಘವೇಂದ್ರ (ಮೊ: 98451 28650) ಅವರನ್ನು ಸಂಪರ್ಕಿಸಬಹುದು. ಇಲ್ಲವೇ ವೆಬ್‌ಸೈಟ್ (ಡಿಡಿಡಿ.ಚ್ಟ್ಞಠಿಚ್ಚಛಿ.್ಚಟಞ) ಮೂಲಕ ಹೆಸರು ನೊಂದಾಯಿಸಬಹುದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.