ADVERTISEMENT

4 ರಿಂದ ವಾಲಿಬಾಲ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಬೆಂಗಳೂರು: ಯುವಕ ಮಂಡಳದ ಆಶ್ರಯದಲ್ಲಿ ಉಡುಪಿ ಜಿಲ್ಲೆಯ ಎಲ್ಲೂರಿನಲ್ಲಿ ಏಪ್ರಿಲ್ 4ರಿಂದ 8ರ ವರೆಗೆ ಪುರುಷರ ಅಖಿಲ ಭಾರತ ಆಹ್ವಾನಿತ ವಾಲಿಬಾಲ್ ಟೂರ್ನಿ ನಡೆಯಲಿದೆ.

ಪ್ರಥಮ (1 ಲಕ್ಷ 1 ರೂಪಾಯಿ ಹಾಗೂ ಟ್ರೋಫಿ), ದ್ವಿತೀಯ (77,777), ತೃತೀಯ (55,555) ಹಾಗೂ ನಾಲ್ಕನೇ (33,333) ಬಹುಮಾನ ನಿಗದಿ ಮಾಡಲಾಗಿದೆ. ಚೆನ್ನೈಯ ಐಒಬಿ, ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಸೇರಿದಂತೆ ಒಟ್ಟು ಂಟು ತಂಡಗಳು ಇಲ್ಲಿ ಪೈಪೋಟಿ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ಟ್ರಯಲ್ಸ್: ಪುದುಚೇರಿಯಲ್ಲಿ ಏಪ್ರಿಲ್ 25ರಿಂದ ನಡೆಯಲಿರುವ ದಕ್ಷಿಣ ವಲಯ ಯೂತ್ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಷಿಪ್‌ಗೆ  ನಏಪ್ರಿಲ್ 1ರಂದು ಬೆಳಿಗ್ಗೆ 9 ಗಂಟೆಗೆ ಕಂಠೀರವ ಕ್ರೀಡಾಂಗಣದಲ್ಲಿ ಆಯ್ಕೆ ಟ್ರಯಲ್ಸ್ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 9341342076 ಹಾಗೂ 080-22228695 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.