ADVERTISEMENT

ವೆಸ್ಟ್‌ ಇಂಡೀಸ್‌ ವಿರುದ್ಧ ನ್ಯೂಜಿಲೆಂಡ್‌ಗೆ ಸರಣಿ ಗೆಲುವು

ಏಜೆನ್ಸೀಸ್
Published 3 ಜನವರಿ 2018, 19:30 IST
Last Updated 3 ಜನವರಿ 2018, 19:30 IST
ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿ ಸರಣಿ ಗೆದ್ದ ನ್ಯೂಜಿಲೆಂಡ್‌ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು ಎಎಫ್‌ಪಿ ಚಿತ್ರ
ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಮಣಿಸಿ ಸರಣಿ ಗೆದ್ದ ನ್ಯೂಜಿಲೆಂಡ್‌ ತಂಡದ ಆಟಗಾರರು ಟ್ರೋಫಿಯೊಂದಿಗೆ ಸಂಭ್ರಮಿಸಿದರು ಎಎಫ್‌ಪಿ ಚಿತ್ರ   

ಮೌಂಟ್‌ ಮೌಂಗಾನುಯಿ: ಆರಂಭಿಕ ಬ್ಯಾಟ್ಸ್‌ಮನ್‌ ಕಾಲಿನ್‌ ಮನ್ರೊ (104; 53ಎ, 3ಬೌಂ, 10ಸಿ) ಅವರ ದಾಖಲೆಯ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ ವೆಸ್ಟ್‌ ಇಂಡೀಸ್‌ ಎದುರಿನ ಮೂರನೇ ಟ್ವೆಂಟಿ–20 ಪಂದ್ಯದಲ್ಲಿ 119ರನ್‌ಗಳಿಂದ ಗೆದ್ದಿದೆ.

ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2–0ರಲ್ಲಿ ಕೈವಶ ಮಾಡಿಕೊಂಡಿದೆ. ಮೊದಲ ಪಂದ್ಯದಲ್ಲಿ ಕಿವೀಸ್‌ ನಾಡಿನ ತಂಡ ಗೆದ್ದಿತ್ತು. ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

ಬೇ ಓವಲ್‌ ಮೈದಾನದಲ್ಲಿ ಬುಧವಾರ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 243ರನ್‌ ದಾಖಲಿಸಿತು. ಕಠಿಣ ಗುರಿ ಬೆನ್ನಟ್ಟಿದ ‍ವಿಂಡೀಸ್‌ 16.3 ಓವರ್‌ಗಳಲ್ಲಿ 124ರನ್‌ಗಳಿಗೆ ಆಲೌಟ್‌ ಆಯಿತು.

ADVERTISEMENT

ಶತಕದ ಆರಂಭ: ಬ್ಯಾಟಿಂಗ್‌ ಆರಂಭಿಸಿದ ವಿಲಿಯಮ್ಸನ್‌ ಪಡೆಗೆ ಮಾರ್ಟಿನ್‌ ಗಪ್ಟಿಲ್‌ (63; 38ಎ, 5ಬೌಂ, 2ಸಿ) ಮತ್ತು ಮನ್ರೊ, ಭದ್ರ ಅಡಿಪಾಯ ಹಾಕಿಕೊಟ್ಟರು. ಇವರು ಮೊದಲ ವಿಕೆಟ್‌ಗೆ 136ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 243 (ಮಾರ್ಟಿನ್‌ ಗಪ್ಟಿಲ್‌ 63, ಕಾಲಿನ್‌ ಮನ್ರೊ 104, ಟಾಮ್‌ ಬ್ರೂಸ್‌ 23, ಕೇನ್‌ ವಿಲಿಯಮ್ಸನ್‌ 19; ಜೆರೋಮ್‌ ಟೇಲರ್‌ 53ಕ್ಕೆ1, ಕಾರ್ಲೊಸ್‌ ಬ್ರಾಥ್‌ವೇಟ್‌ 50ಕ್ಕೆ2).
ವೆಸ್ಟ್‌ ಇಂಡೀಸ್‌: 16.3 ಓವರ್‌ಗಳಲ್ಲಿ 124 (ಆ್ಯಂಡ್ರೆ ಫ್ಲೆಚರ್‌ 46, ರೋಮನ್ ಪೊವೆಲ್‌ 16, ಕಾರ್ಲೊಸ್‌ ಬ್ರಾಥ್‌ವೇಟ್‌ 15, ಆ್ಯಷ್ಲೆ ನರ್ಸ್‌ ಔಟಾಗದೆ 14, ಜೆರೋಮ್‌ ಟೇಲರ್‌ 13; ಟಿಮ್‌ ಸೌಥಿ 21ಕ್ಕೆ3, ಟ್ರೆಂಟ್‌ ಬೌಲ್ಟ್‌ 29ಕ್ಕೆ2, ಕರನ್‌ ಕಿಚನ್‌ 33ಕ್ಕೆ1, ಈಶ್‌ ಸೋಧಿ 25ಕ್ಕೆ2).

ಫಲಿತಾಂಶ: ನ್ಯೂಜಿಲೆಂಡ್‌ಗೆ 119ರನ್‌ ಗೆಲುವು. 2–0ರಲ್ಲಿ ಸರಣಿ. ಪಂದ್ಯ ಮತ್ತು ಸರಣಿ ಶ್ರೇಷ್ಠ: ಕಾಲಿನ್‌ ಮನ್ರೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.