ADVERTISEMENT

ಕೊಕ್ಕೊ: ಧಾರವಾಡ ತಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಧಾರವಾಡದಲ್ಲಿ ಶನಿವಾರ ಆರಂಭವಾದ ಕೊಕ್ಕೊ ಟೂರ್ನಿಯಲ್ಲಿ ಬೆಳಗಾವಿ ತಂಡದ ಆಟಗಾರರು (ಕೆಂಪು ಪೋಷಾಕು) ತುಮಕೂರು ತಂಡದ ಎದುರು ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ
ಧಾರವಾಡದಲ್ಲಿ ಶನಿವಾರ ಆರಂಭವಾದ ಕೊಕ್ಕೊ ಟೂರ್ನಿಯಲ್ಲಿ ಬೆಳಗಾವಿ ತಂಡದ ಆಟಗಾರರು (ಕೆಂಪು ಪೋಷಾಕು) ತುಮಕೂರು ತಂಡದ ಎದುರು ಪಾಯಿಂಟ್‌ ಗಳಿಸಲು ಪ್ರಯತ್ನಿಸಿದರು –ಪ್ರಜಾವಾಣಿ ಚಿತ್ರ/ಬಿ.ಎಂ.ಕೇದಾರನಾಥ   

ಧಾರವಾಡ: ಚುರುಕಿನ ಆಟವಾಡಿದ ಧಾರವಾಡ ತಂಡ ಇಲ್ಲಿನ ಕುಮಾರೇಶ್ವರ ಸಾಂಸ್ಕೃತಿಕ ಸಂಸ್ಥೆ, ಫ್ರೆಂಡ್ಸ್‌ ಸೋಷಿಯಲ್‌ ಕ್ಲಬ್ ಸಹಯೋಗದಲ್ಲಿ ಶನಿವಾರ ಆರಂಭವಾದ ರಾಜ್ಯಮಟ್ಟದ ಆಹ್ವಾನಿತ ಹೊನಲು, ಬೆಳಕಿನ ಕೊಕ್ಕೊ ಟೂರ್ನಿಯ ಪಂದ್ಯದಲ್ಲಿ ಗೆದ್ದಿತು.

ಮೊದಲ ಪಂದ್ಯದಲ್ಲಿ ರಾಣೇಬೆನ್ನೂರು ವಿರುದ್ಧದ ಪಂದ್ಯದಲ್ಲಿ ಧಾರವಾಡ ತಂಡ ಒಂದು ಸುತ್ತು ಹಾಗೂ 5 ಅಂಕಗಳೊಂದಿಗೆ ಜಯ ಗಳಿಸಿತು.

ಮತ್ತೊಂದು ಪಂದ್ಯದಲ್ಲಿ ಸಂಶಿ ತಂಡದ ವಿರುದ್ಧ ರಟ್ಟಿಹಳ್ಳಿ ತಂಡ ವಿಜಯಿಯಾಯಿತು.

ADVERTISEMENT

ತುಮಕೂರಿನ ವಿವೇಕಾನಂದ ತಂಡದ ವಿರುದ್ಧ ಬೆಳಗಾವಿ ತಂಡ ಜಯಿಸಿತು.

ವಿಜಯೀ ತಂಡದ ಪರವಾಗಿ ಮಾರುತಿ 9 ಅಂಕಗಳ್ನು ಗಳಿಸಿದರು. ಬೆಂಗಳೂರಿನ ಮಾನಸ ತಂಡದ ವಿರುದ್ಧ ಬಸವ ಕ್ರೀಡಾ ಸಂಸ್ಥೆ ತಂಡ 13 ಅಂಕಗಳಿಂದ ಜಯಗಳಿಸಿತು. ಮೈಸೂರಿನ ಸ್ಫೂರ್ತಿ ತಂಡದ ವಿರುದ್ಧ ರಟ್ಟಿಹಳ್ಳಿಯ ಹೊಯ್ಸಳ ತಂಡ 3 ಅಂಕಗಳಿಂದ ಗೆದ್ದಿತು.

ಜಮಖಂಡಿ ಕ್ರೀಡಾ ಸಂಸ್ಥೆಯ ವಿರುದ್ಧ ಧಾರವಾಡ ಕ್ರೀಡಾ ಸಂಸ್ಥೆ 10 ಅಂಕಗಳ ಜಯ ಸಾಧಿಸಿತು.

ಬೆಳಗಾವಿ ಕ್ರೀಡಾ ಸಂಸ್ಥೆ ತಂಡದ ವಿರುದ್ಧ ಅಮರಾವತಿ ತಂಡ 2 ಅಂಕಗಳ ಜಯ ಸಾಧಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.