ADVERTISEMENT

ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಗೆದ್ದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿ.ವಿ ಸಿಂಧು

ಏಜೆನ್ಸೀಸ್
Published 13 ಜನವರಿ 2018, 8:09 IST
Last Updated 13 ಜನವರಿ 2018, 8:09 IST
ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಗೆದ್ದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿ.ವಿ ಸಿಂಧು
ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ ಗೆದ್ದ ಹಣವನ್ನು ಕ್ಯಾನ್ಸರ್ ಆಸ್ಪತ್ರೆಗೆ ನೀಡಿದ ಪಿ.ವಿ ಸಿಂಧು   

ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಹಿಂದಿ ಟಿವಿ ಕಾರ್ಯಕ್ರಮ(ಕೌನ್ ಬನೇಗಾ ಕರೋಡ್‍ಪತಿ)ದಲ್ಲಿ ಗೆದ್ದ ₹ 25 ಲಕ್ಷ ಹಣವನ್ನು ಶುಕ್ರವಾರ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿದ್ದಾರೆ.

ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರು ನಿರೂಪಿಸುವ ‘ ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿಂಧು, ₹ 25 ಲಕ್ಷ ಹಣ ಗೆದ್ದಿದ್ದರು. ಆ ಹಣವನ್ನು ಬಸವತಾರಕಮ್‌ ಇಂಡೋ-ಅಮೆರಿಕನ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಸಂಸ್ಥೆಗೆ ದಾನ ಮಾಡಿದ್ದಾರೆ.

ಸಿಂಧು ಅವರ ನಿರ್ಧಾರಕ್ಕೆ ಆಸ್ಪತ್ರೆಯ ಮುಖ್ಯಸ್ಥ ಹಾಗೂ ಟಾಲಿವುಡ್‍ ನಟ ಎನ್.ಬಾಲಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.