ADVERTISEMENT

ಯೂಕಿ ಭಾಂಬ್ರಿ ಮುಖ್ಯ ಸುತ್ತಿಗೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 20:07 IST
Last Updated 14 ಜನವರಿ 2018, 20:07 IST

ಮೆಲ್ಬರ್ನ್‌: ಭಾರತದ ಯೂಕಿ ಭಾಂಬ್ರಿ ಕೆನಡಾದ ಪೀಟರ್ ಪೊಲನ್ಸ್ಕಿ ಎದುರು ಜಯ ಗಳಿಸಿ ಆಸ್ಟ್ರೇಲಿಯಾ ಓಪನ್‌ ಮುಖ್ಯ ಸುತ್ತಿಗೆ ಪ್ರವೇಶಿಸಿದರು.

ಅಂತಿಮ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅವರು  1–6, 6–3, 6–3ರಿಂದ ಜಯ ಗಳಿಸಿದರು. ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ ಟೂರ್ನಿಯೊಂದರಲ್ಲಿ ಸ್ಪರ್ಧಿಸುವ ಅವಕಾಶವನ್ನು ರಾಮ್‌ಕುಮಾರ್‌ ರಾಮನಾಥನ್ ಕಳೆದುಕೊಂಡರು. ಕೆನಡಾದ ವಾಸೆಕ್‌ ಪಾಸ್ಪಿಸಿಲ್‌ ಎದುರು 4–6, 6–4, 4–6 ರಿಂದ ಅವರು ಸೋತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT