ADVERTISEMENT

ಸಂತೋಷ್‌ ಟ್ರೋಫಿ: ರಾಜ್ಯ ತಂಡಕ್ಕೆ ವಿಘ್ನೇಶ್ ನಾಯಕ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST

ಬೆಂಗಳೂರು: ಇದೇ 17ರಿಂದ 22ರ ವರೆಗೆ ನಗರದಲ್ಲಿ ನಡೆಯಲಿರುವ ಸಂತೋಷ್‌ ಟ್ರೋಫಿ ಫುಟ್‌ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ರಾಜ್ಯ ತಂಡವನ್ನು ಓಝೋನ್ ಫುಟ್‌ಬಾಲ್ ಕ್ಲಬ್‌ನ ವಿಘ್ನೇಶ್‌ ಜಿ ಮುನ್ನಡೆಸುವರು.

20 ಮಂದಿ ಆಟಗಾರರ ತಂಡವನ್ನು ರಾಜ್ಯ ಫುಟ್‌ಬಾಲ್ ಸಂಸ್ಥೆ ಸೋಮವಾರ ಪ್ರಕಟಿಸಿದ್ದು ಸ್ಟೂಡೆಂಟ್ ಯೂನಿಯನ್ ಎಫ್‌ಸಿಯ ಸುನಿಲ್ ಕುಮಾರ್‌ ಎಂ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ.

ತಂಡ ಇಂತಿದೆ: ವಿಘ್ನೇಶ್‌ ಜಿ  (ಓಜೋನ್ ಎಫ್‌ಸಿ–ನಾಯಕ), ಸುನಿಲ್ ಕುಮಾರ್ ಎಂ (ಸ್ಟೂಡೆಂಟ್ಸ್ ಯೂನಿಯನ್‌ ಎಫ್‌ಸಿ–ಉಪನಾಯಕ), ಶಯೀನ್ ಖಾನ್‌ ಸಿ.ಪಿ, ಶಹಬಾಜ್ ಖಾನ್‌, ಅಜರುದ್ದೀನ್‌ ಎಸ್‌.ಕೆ, ಲಿಯಾನ್ ಆಗಸ್ಟಿನ್‌ (ಬೆಂಗಳೂರು ಎಫ್‌ಸಿ), ಅಭಿಷೇಕ್ ದಾಸ್‌, ಆ್ಯಂಟೊ ರಶಿತ್ ಸಗೈರಾಜ್‌, ವಿಘ್ನೇಶ್‌ ಡಿ, ಅನೂಪ್‌ ತೆರೇಸ್‌ ರಾಜ್‌ (ಓಝೋನ್‌ ಎಫ್‌ಸಿ), ಶಫೀಲ್ ಪಿ.ಪಿ, ಎಡ್ವಿನ್ ರೊಜಾರಿಯೊ (ಬೆಂಗಳೂರು ಇಂಡಿಪೆಂಡೆನ್ಸ್‌), ರಮೇಶ್ ಬಿ (ಬೆಂಗಳೂರು ಈಗಲ್ಸ್‌), ಶಶಿಕುಮಾರ್‌, ಶಮಂತ್‌, ಅಮೋಸ್‌ (ಸ್ಟೂಡೆಂಟ್ಸ್ ಯೂನಿಯನ್‌), ರಮೇಶ್‌ ಬಿ (ಬೆಂಗಳೂರು ಈಗಲ್ಸ್‌), ಖೇತ್‌ ರೇಮಂಡ್ಸ್‌ ಸ್ಟೀಫನ್‌, ಸೋಲೈಮಲೈ (ಸೌಥ್‌ ಯುನೈಟೆಡ್‌), ಲಿಟನ್‌ ಶಿಲ್ (ಎಂಇಜಿ), ರಾಜೇಶ್‌ ಎಸ್‌ (ರೈಲು ಗಾಲಿ ಕಾರ್ಖಾನೆ).

ADVERTISEMENT

ಕಾಯ್ದಿರಿಸಿದ ಆಟಗಾರರು: ಶ್ರೇಯಸ್‌ (ಮೈಸೂರು), ಜಾನ್ ಪೀಟರ್‌, ಅಭಿಷೇಕ್ ರಮೇಶ್‌ (ಬೆಂಗಳೂರು ಇಂಡಿಪೆಂಡೆನ್ಸ್‌), ಶೇಕ್ ಮುಜೀಬ್‌ (ಎಂಇಜಿ), ಮೈರಾನ್ ಸೀಜ್ ಮೆಂಡೆಜ್‌ (ಬೆಂಗಳೂರು ಎಫ್‌ಸಿ), ಸುದರ್ಶನ್ ಲೋಕೂರ್‌ (ಬೆಳಗಾವಿ ಜಿಲ್ಲೆ), ಫ್ರಾಂಕ್ಲಿನ್ ಅಮಲ್‌ರಾಜ್‌ (ಯಂಗ್‌ ಚಾಲೆಂಜರ್ಸ್‌), ಅಕ್ಷಯ್‌ ಎನ್‌, ಶರತ್ ಮೋಹನ್‌ (ಸ್ಟೂಡೆಂಟ್ ಯೂನಿಯನ್‌), ಸತೀಶ್ ಕುಮಾರ್ ಎಂ.ಆರ್‌ (ಸೌಥ್ ಯುನೈಟೆಡ್‌).

ಎಂ.ಕುಮಾರ್‌ (ವ್ಯವಸ್ಥಾಪಕ), ಪಿ.ಮುರಳೀಧರನ್‌ (ಮುಖ್ಯ ಕೋಚ್‌), ಹರೀಶ್‌ ವಿ.ಕೆ (ಕೋಚ್‌), ಎಸ್‌.ಶಾಹಿ (ಗೋಲ್‌ಕೀಪಿಂಗ್ ಕೋಚ್‌), ಆಯೆತಪಳ್ಳಿ ಪ್ರಸಾದ್‌ (ಫಿಜಿಯೊ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.