ಬೆಂಗಳೂರು: ಮಾಡಿದುದನ್ನು ಉಣ್ಣಲೇಬೇಕೆಂದು ಕರ್ಮಸಿದ್ಧಾಂತ. ಇದು ಸಾಮಾಜಿಕ ತಾಣದಲ್ಲಿನ ಚಟುವಟಿಕೆಗೂ ಅನ್ವಯಿಸುತ್ತದೆ ಎಂಬುದಕ್ಕೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವೀಟ್ ಉದಾಹರಣೆ. ಇಲ್ಲಿಯವರೆಗೆ ಐಪಿಎಲ್ ಟಿ20 ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡಿದ್ದ ಆಫ್ಸ್ಪಿನ್ನರ್ ಹರ್ಭಜನ್ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ (ಸಿಎಸ್ಕೆ) ಸ್ಥಾನಪಡೆದಿದ್ದಾರೆ.
ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಸಿಎಸ್ಕೆ ತಂಡ ಹರ್ಭಜನ್ ಅವರನ್ನು ₹ 2 ಕೋಟಿಗೆ ಖರೀದಿ ಮಾಡಿದೆ. ಸಿಎಸ್ಕೆ ತಂಡದಲ್ಲಿ ಸ್ಥಾನಗಳಿಸಿದ ಸಿಂಗ್, ತಮಿಳಿನಲ್ಲಿ ಟ್ವೀಟ್ ಮಾಡಿದ್ದು ಅಭಿಮಾನಿಗಳಿಗೆ ಭಾರಿ ಖುಷಿ ನೀಡಿದೆ.
ಹರ್ಭಜನ್ ಅವರ ಟ್ವೀಟ್ಗೆ ತಮಿಳು ಭಾಷಾ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಈ ಟ್ವೀಟ್ 9 ಸಾವಿರಕ್ಕಿಂತಲೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.