ADVERTISEMENT

ಕಿರಿಯರ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಶತಕ ಗಳಿಸಿದ ಐದನೇ ಆಟಗಾರ ಮನ್‌ಜೋತ್ ಕಾರ್ಲಾ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 14:40 IST
Last Updated 3 ಫೆಬ್ರುವರಿ 2018, 14:40 IST
ಭರ್ಜರಿ ಶತಕದ ಮೂಲಕ ಭಾರತ ತಂಡದ ಗೆಲುವಿಗೆ ನೆರವಾದ ಮನ್‌ಜೋತ್ ಕಾಲ್ರಾ
ಭರ್ಜರಿ ಶತಕದ ಮೂಲಕ ಭಾರತ ತಂಡದ ಗೆಲುವಿಗೆ ನೆರವಾದ ಮನ್‌ಜೋತ್ ಕಾಲ್ರಾ

ಮೌಂಟ್‌ ಮೌಂಗನೂಯಿ(ನ್ಯೂಜಿಲೆಂಡ್‌): ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಮೋಘ ಶತಕ ಸಿಡಿಸುವ ಮೂಲಕ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಐದನೇ ಬ್ಯಾಟ್ಸ್‌ಮನ್‌ ಎಂಬ ಶ್ರೇಯಕ್ಕೆ ಭಾರತ ಮನ್‌ಜೋತ್ ಕಾಲ್ರಾ ಪಾತ್ರರಾದರು.

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸ್ಟ್ರೇಲಿಯಾ ತಂಡ 47.2 ಓವರ್‌ಗಳಲ್ಲಿ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 216 ರನ್‌ ಕಲೆಹಾಕಿತ್ತು.

ಈ ಗುರಿಯನ್ನು ಭಾರತ ತಂಡ ಕೇವಲ 38.5 ಓವರ್‌ಗಳಲ್ಲಿ ತಲುಪಿತು. ಅಜೇಯ ಆಟವಾಡಿದ ಆರಂಭಿಕ ಆಟಗಾರ ಕಾರ್ಲಾ 108 ಎಸೆತಗಳಲ್ಲಿ 8 ಬೌಂಡರಿ 3 ಭರ್ಜರಿ ಸಿಕ್ಸರ್‌ ಸಹಿತ 101 ರನ್‌ ಗಳಿಸಿ ಶತಕದ ಸಂಭ್ರಮ ಆಚರಿಸಿದರು.

ADVERTISEMENT

ಇದುವರೆಗೆ ಕಿರಿಯರ ವಿಶ್ವಕಪ್‌ ಫೈನಲ್‌ ಪಂದ್ಯಗಳಲ್ಲಿ ಒಟ್ಟು ನಾಲ್ಕು ಶತಕಗಳು ದಾಖಲಾಗಿದ್ದವು.

1988ರಲ್ಲಿ ನಡೆದ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಬ್ರೆಟ್‌ ವಿಲಿಯಮ್ಸ್‌(108), 1998ರಲ್ಲಿ ನ್ಯೂಜಿಲ್ಯಾಂಡ್‌ ಎದುರಿನ ಪಂದ್ಯದಲ್ಲಿ ಇಂಗ್ಲೆಂಡಿನ ಸ್ಟೀಫನ್‌ ಪೀಟರ್ಸ್‌(107), 2002ರಲ್ಲಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಜರ್ರಾದ್‌ ಬ್ರೂಕ್‌(ಅಜೇಯ 100), 2012ರಲ್ಲಿ ನಡೆದ ಆಸ್ಟ್ರೇಲಿಯಾಎದುರಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ಉನ್ಮುಕ್ತ್‌ ಚಾಂದ್‌(ಅಜೇಯ 111) ಶತಕದ ಸಾಧನೆ ಮಾಡಿದ್ದರು.

[Related]

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.