ADVERTISEMENT

ದೋನಿ ಉಪಸ್ಥಿತಿಯಲ್ಲಿ ಹೆಚ್ಚು ಪ್ರಯೋಜನ ಪಡೆಯುತ್ತಿರುವ ಕೊಹ್ಲಿ: ಕಿರಣ್‌ ಮೋರೆ

ಏಜೆನ್ಸೀಸ್
Published 19 ಫೆಬ್ರುವರಿ 2018, 9:46 IST
Last Updated 19 ಫೆಬ್ರುವರಿ 2018, 9:46 IST
ಕಿರಣ್‌ ಮೋರೆ ಹಾಗೂ ಎಂ.ಎಸ್‌.ದೋನಿ(ಸಂಗ್ರಹ ಚಿತ್ರ).
ಕಿರಣ್‌ ಮೋರೆ ಹಾಗೂ ಎಂ.ಎಸ್‌.ದೋನಿ(ಸಂಗ್ರಹ ಚಿತ್ರ).   

ನವದೆಹಲಿ: ‘ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌.ದೋನಿ ಅವರ ಉಪಸ್ಥಿತಿಯಲ್ಲಿ ನಾಯಕ ವಿರಾಟ್‌ ಕೊಹ್ಲಿ ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಭಾರತೀಯ ಹಿರಿಯ ಕ್ರಿಕೆಟಿಗ ಕಿರಣ್‌ ಮೋರೆ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ದೋನಿ ಒಬ್ಬ ಶ್ರೇಷ್ಠ ಆಟಗಾರ ಎಂಬುದರಲ್ಲಿ ಯಾವುದೆ ಅನುಮಾನವಿಲ್ಲ. ತಂಡದ ನಾಯಕ ಸೇರಿದಂತೆ ಸ್ಪಿನ್ನರ್‌ಗಳು ದೋನಿ ಅವರಿಂದ ಹೆಚ್ಚು ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ದಕ್ಷಿಣ ಆಫ್ರಿಕಾ ಸರಣಿಯಲ್ಲಿ ದೋನಿ ಹೆಚ್ಚು ರನ್‌ ಗಳಿಸಿದೆ ಇರಬಹುದು. ಆದರೆ, ಅವರು ತಂಡದಲ್ಲಿರುವುದರಿಂದ ಯಶಸ್ಸು ಗಳಿಸಲು ಸಾಧ್ಯವಾಗಿದೆ. ದೋನಿ ಬೌಲರ್‌ಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದು, ಅವರು ಯಾವುದೆ ಒತ್ತಡವಿಲ್ಲದೆ ಬೌಲಿಂಗ್‌ ಮಾಡುತ್ತಾರೆ’ ಎಂದಿದ್ದಾರೆ.

ADVERTISEMENT

ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ವಿರಾಟ್‌ ಪಡೆ ಮೂರು ಪಂದ್ಯಗಳ ಟ್ವೆಂಟಿ–20 ಕ್ರಿಕೆಟ್‌ ಸರಣಿಯಲ್ಲಿ 1–0ರಲ್ಲಿ ಮುನ್ನಡೆ ಸಾಧಿಸಿದೆ.

ಎರಡನೇ ಟ್ವೆಂಟಿ–20 ಕ್ರಿಕೆಟ್‌ ಪಂದ್ಯ ಫೆ.21ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.