ಬೆಂಗಳೂರು: ಕರ್ನಾಟಕದ ಬಿ.ಆರ್.ನಿಕ್ಷೇಪ್ ಹಾಗೂ ಅಸ್ಸಾಂನ ಶೇಖ್ ಇಫ್ತಿಕಾರ್ ಜೋಡಿಯು ಹೈದರಾಬಾದ್‌ನಲ್ಲಿ ನಡೆದ ಎಐಟಿಎ ರಾಷ್ಟ್ರೀಯ ರ‍್ಯಾಂಕಿಂಗ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ನಿಕ್ಷೇಪ್–ಇಫ್ತಿಕಾರ್ 7-6(3), 6-4ರಿಂದ ತಮಿಳುನಾಡಿನ ಇರ್ಫಾನ್ ಹುಸೇನ್–ಇಹಸಾನ್ ಹುಸೇನ್ ಎದುರು ಜಯಭೇರಿ ಮೊಳಗಿಸಿದರು.
ಕರ್ನಾಟಕ–ಅಸ್ಸಾಂ ಜೋಡಿಗೆ ಇರ್ಫಾನ್ ಹಾಗೂ ಇಹಸಾನ್ ಉತ್ತಮ ಸವಾಲು ಒಡ್ಡಿದರು. ಆದರೆ ಪಂದ್ಯ ಕೈವಶ ಮಾಡಿಕೊಳ್ಳುವಲ್ಲಿ ನಿಕ್ಷೇಪ್–ಇಫ್ತಿಕಾರ್ ಯಶಸ್ವಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.