ADVERTISEMENT

ಕೊರೊನಾ ಭೀತಿ: ನೆರಳಿನೊಂದಿಗೆ ದಿನೇಶ್ ಕಾರ್ತಿಕ್ ಅಭ್ಯಾಸ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 7:51 IST
Last Updated 22 ಮಾರ್ಚ್ 2020, 7:51 IST
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್   
""

ಬೆಂಗಳೂರು: ಪ್ರತಿದಿನವೂ ಕನಿಷ್ಠ ಆರೇಳು ತಾಸು ತಾಲೀಮಿನಲ್ಲಿ ಕಳೆಯುತ್ತಿದ್ದವರು ಈಗ ಕೊರೊನಾ ವೈರಸ್ ದಿಗ್ಬಂಧನದಿಂದಾಗಿ ಮನೆಯಲ್ಲಿ ಕಾಲ ಕಳೆಯಲು ವಿಧವಿಧ ಹವ್ಯಾಸಗಳಿಗೆ ಮೊರೆ ಹೋಗುತ್ತಿದ್ದಾರೆ.

ಆದರೆ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್, ಮನೆ ಯೊಳಗಿನ ಒಂಟಿತನವನ್ನು ಕಳೆಯಲು ಕ್ರಿಕೆಟ್‌ ಅನ್ನೇ ನೆಚ್ಚಿಕೊಂಡಿದ್ದಾರೆ. ಅಲ್ಲಿಯೂ ಅವರು ಅಭ್ಯಾಸ ಬಿಟ್ಟಿಲ್ಲ. ಹೌದು ಮನೆಯಲ್ಲಿಯೇ ಶ್ಯಾಡೊ ಪ್ರಾಕ್ಟೀಸ್‌ ಆರಂಭಿಸಿದ್ದಾರೆ. ಬ್ಯಾಟ್ ಮತ್ತು ಟೆನಿಸ್‌ ಚೆಂಡಿನಲ್ಲಿ ಮನೆಯಲ್ಲಿಯೇ ಬ್ಯಾಟಿಂಗ್‌ನ ವಿವಿಧ ಹೊಡೆತಗಳನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಫಿಟ್‌ನೆಸ್ ವ್ಯಾಯಾಮಗಳು ಮತ್ತು ಧ್ಯಾನ, ಯೋಗ ಮಾಡುತ್ತಿದ್ದಾರೆ.

ತಮ್ಮ ಈ ಎಲ್ಲ ಕಸರತ್ತುಗಳ ವಿಡಿಯೊವನ್ನು ಟ್ವಿಟರ್‌ಗೆ ಹಾಕಿದ್ದಾರೆ. ಬಹಳಷ್ಟು ಅಭಿಮಾನಿಗಳು ಈ ದೃಶ್ಯಾವಳಿಗಳನ್ನು ಮೆಚ್ಚಿಕೊಂಡಿದ್ದಾರೆ.

ADVERTISEMENT

‘ಎರಡು–ಮೂರು ದಿನಗಳಿಂದ ನಾನು ಇದನ್ನು ಮನೆಯಲ್ಲಿಯೇ ಮಾಡುತ್ತಿದ್ದೇನೆ. ಕ್ರಿಕೆಟ್ ಆಡುವುದನ್ನು ತಪ್ಪಿಸಿಕೊಳ್ಳುತ್ತಿರುವ ಕೊರಗು ಕಾಡುತ್ತಿದೆ ನಿಜ. ಆದರೂ ಮನೆಯಲ್ಲಿದ್ದುಕೊಂಡೆ ಕ್ರಿಕೆಟ್‌ನೊಂದಿಗಿನ ನಂಟು ಕಾಪಾಡಿಕೊಂಡಿದ್ದೇನೆ. ಇದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವೂ ಹೌದು. ನೀವು ಕುಡ ನೈರ್ಮಲ್ಯ ಕಾಪಾಡಿಕೊಳ್ಳಿ, ಸಾಮಾಜಿಕ ಸಂಪರ್ಕ, ಜನದಟ್ಟಣೆಗಳಿಂದ ದೂರವಿರಿ. ಅದಷ್ಟು ಮನೆಯಲ್ಲಿಯೇ ಇದ್ದು, ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸಹಕರಿಸಿ’ ಎಂದು ದಿನೇಶ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಶ್ರೇಯಸ್ ಅಯ್ಯರ್

ಶ್ರೇಯಸ್ ಮ್ಯಾಜಿಕ್: ಚೆನ್ನೈನಲ್ಲಿ ದಿನೇಶ್ ಒಂದು ತರಹ ಟೈಂ ಪಾಸ್ ಮಾಡುತ್ತಿದ್ದರೆ, ಇತ್ತ ಮುಂಬೈನಲ್ಲಿ ಶ್ರೇಯಸ್ ಅಯ್ಯರ್ ಇನ್ನೊಂದು ರೀತಿಯಲ್ಲಿ ತಮ್ಮ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ.

ತಮ್ಮ ಸಹೋದರಿಯ ಮುಂದೆ ಕಾರ್ಡ್‌ ಮ್ಯಾಜಿಕ್ ತೋರಿಸುತ್ತಿರುವ ಬಲಗೈ ಬ್ಯಾಟ್ಸ್‌ಮನ್ ಶ್ರೇಯಸ್‌ ವಿಡಿಯೊವನ್ನು ಬಿಸಿಸಿಐನಲ್ಲಿ ಹಾಕ ಲಾಗಿದೆ. ಇದೂ ಮೆಚ್ಚುಗೆ ಗಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.