ಚೆಮ್ಸ್‌ಫೋರ್ಡ್ (ಬ್ರಿಟನ್): ಏಕಾಂಶ್ ಸಿಂಗ್ ಅವರ ಶತಕದ (117ರನ್; 155 ಎ, 4x14, 3x6) ನೆರವಿನಿಂದ ಇಂಗ್ಲೆಂಡ್ ಯುವ ತಂಡವು (19 ವರ್ಷದೊಳಗಿವರ) ಭಾರತದ ಎದುರಿನ ಮೊದಲ ‘ಟೆಸ್ಟ್’ನ ಪ್ರಥಮ ಇನಿಂಗ್ಸ್‌ನಲ್ಲಿ ಗೌರವದ ಮೊತ್ತ ದಾಖಲಿಸಿತು.
ಮಳೆಯಿಂದಾಗಿ ಎರಡನೇ ದಿನದಾಟದಲ್ಲಿ ಕೇವಲ 28.3 ಓವರ್‌ಗಳ ಆಟ ನಡೆಯಿತು. ಇಂಗ್ಲೆಂಡ್ ತಂಡ 81.3 ಓವರ್‌ಗಳಲ್ಲಿ 309 ರನ್‌ಗಳಿಗೆ ಆಲೌಟ್ ಆಯಿತು. ಇನಿಂಗ್ಸ್ ಆರಂಭಿಸಿದ ಭಾರತ, ದಿನದಂತ್ಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 51ರನ್ ಗಳಿಸಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಇಂಗ್ಲೆಂಡ್ ಯುವ ತಂಡ: 81.3 ಓವರ್‌ಗಳಲ್ಲಿ 309(ಏಕಾಂಶ್ ಸಿಂಗ್ 117, ಜೇಮ್ಸ್ ಮಿಂಟೊ 46; ನಮನ್ ಪುಷ್ಪಕ್ 4ಕ್ಕೆ76)
ಭಾರತ ಯುವ ತಂಡ: 9 ಓವರ್‌ಗಳಲ್ಲಿ 1 ವಿಕೆಟ್‌ಗೆ 51(ಆಯುಶ್ ಮ್ಹಾತ್ರೆ ಔಟಾಗದೇ 24; ಅಲೆಕ್ಸ್ ಗ್ರೀನ್ 1ಕ್ಕೆ34)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.