ADVERTISEMENT

ದಸರಾ ಕೂಟಕ್ಕೆ 4,500 ಸ್ಪರ್ಧಿಗಳು

ಒಲಿಂಪಿಯನ್ ಕುಸ್ತಿಪಟು ಸಾಕ್ಷಿ ಮಲಿಕ್ ಚಾಲನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2022, 22:38 IST
Last Updated 28 ಸೆಪ್ಟೆಂಬರ್ 2022, 22:38 IST
ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ನಾಡಕುಸ್ತಿಯಲ್ಲಿ ಬುಧವಾರ ಕುಂಬಾರಕೊಪ್ಪಲಿನ ನಂದನ್‌ಕುಮಾರ್ ಹಾಗೂ ಮರಟಿಕ್ಯಾತನಹಳ್ಳಿಯ ಶಶಾಂಕ್‌ ನಡುವಿನ ಪೈಪೋಟಿಯ ದೃಶ್ಯ. ಈ ಕುಸ್ತಿ ಸಮಬಲದಲ್ಲಿ ಕೊನೆಗೊಂಡಿತು –ಪ್ರಜಾವಾಣಿ ಚಿತ್ರ
ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ನಾಡಕುಸ್ತಿಯಲ್ಲಿ ಬುಧವಾರ ಕುಂಬಾರಕೊಪ್ಪಲಿನ ನಂದನ್‌ಕುಮಾರ್ ಹಾಗೂ ಮರಟಿಕ್ಯಾತನಹಳ್ಳಿಯ ಶಶಾಂಕ್‌ ನಡುವಿನ ಪೈಪೋಟಿಯ ದೃಶ್ಯ. ಈ ಕುಸ್ತಿ ಸಮಬಲದಲ್ಲಿ ಕೊನೆಗೊಂಡಿತು –ಪ್ರಜಾವಾಣಿ ಚಿತ್ರ   

ಮೈಸೂರು: ನವರಾತ್ರಿಯ ರಂಗಿನಲ್ಲಿ ಮುಳುಗಿರುವ ಅರಮನೆ ನಗರಿಯಲ್ಲಿ ಗುರುವಾರದಿಂದ ರಾಜ್ಯ‌ದಸರಾ ಕ್ರೀಡಾಕೂಟ ಆರಂಭವಾಗಲಿದೆ. ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಅಕ್ಟೋಬರ್ 2ರವರೆಗೆ ಕ್ರೀಡೆಗಳು ಆಯೋಜನೆಗೊಂಡಿವೆ. ಸುಮಾರು 4,500 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ.

ಒಲಿಂಪಿಕ್ ಪದಕವಿಜಯೀ ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಸಂಜೆ 4.30ಕ್ಕೆ ಕೂಟಕ್ಕೆ ಚಾಲನೆ ನೀಡುವರು. ನಾಲ್ಕು ದಿನಗಳಲ್ಲಿ ವಿವಿಧ ಕ್ರೀಡಾಂಗಣಗಳಲ್ಲಿ 27 ಸ್ಪರ್ಧೆಗಳು ನಡೆಯಲಿವೆ.ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್‌,ಬಾಲ್‌ ಬ್ಯಾಡ್ಮಿಂಟನ್‌, ಬ್ಯಾಸ್ಕೆಟ್‌ಬಾಲ್‌, ಬಾಕ್ಸಿಂಗ್‌, ಸೈಕ್ಲಿಂಗ್‌, ಫೆನ್ಸಿಂಗ್‌, ಫುಟ್‌ಬಾಲ್‌, ಜಿಮ್ನಾಸ್ಟಿಕ್ಸ್, ಹ್ಯಾಂಡ್‌ಬಾಲ್‌, ಹಾಕಿ, ಜೂಡೋ, ಕಬಡ್ಡಿ, ಕೊಕ್ಕೊ, ಟೆನಿಸ್‌, ನೆಟ್‌ಬಾಲ್‌, ಶೂಟಿಂಗ್‌, ಈಜು, ಟೇಬಲ್ ಟೆನಿಸ್‌, ಟೆಕ್ವಾಂಡೊ, ಥ್ರೋಬಾಲ್, ವಾಲಿಬಾಲ್, ವೇಟ್‌ಲಿಫ್ಟಿಂಗ್‌, ಕುಸ್ತಿ, ವುಶು, ಯೋಗ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.

ಇದೇ ಮೊದಲ ಬಾರಿ ಯೋಗ, ಶೂಟಿಂಗ್‌ ಸ್ಪರ್ಧೆಗಳು ನಡೆಯುತ್ತಿವೆ.

ADVERTISEMENT

ವಿಜೇತ ಕ್ರೀಡಾಪಟುಗಳಿಗೆ ವೈಯಕ್ತಿಕ ಕ್ರೀಡಾ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ₹ 8 ಸಾವಿರ, ನಂತರದ ಎರಡು ಸ್ಥಾನಗಳಿಗೆ ಕ್ರಮವಾಗಿ ₹5 ಸಾವಿರ ಹಾಗೂ ₹ 2,500 ನೀಡಲಾಗುತ್ತಿದೆ. ಗುಂಪು ಕ್ರೀಡೆಯಲ್ಲಿ ವಿಜೇತರಾದವರ ನಗದು ಪುರಸ್ಕಾರ
ವನ್ನು ₹ 4 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಕ್ರೀಡಾಕೂಟದಲ್ಲಿ ನೂತನ ದಾಖಲೆ ನಿರ್ಮಿಸಿದವರಿಗೆ ನೀಡಲಾಗುತ್ತಿದ್ದ ನಗದು ಪುರಸ್ಕಾರವನ್ನು ₹10 ಸಾವಿರರಿಂದ ₹ 20 ಸಾವಿರಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ ಪದಕ, ಪ್ರಮಾಣಪತ್ರ ನೀಡಲಾಗುತ್ತಿದೆ. ನಗದು ಮೊತ್ತವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಮೂಲಗಳು ತಿಳಿಸಿವೆ.

ಫಲಿತಾಂಶಕ್ಕಾಗಿ www.dasaracmcup.com ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.