ADVERTISEMENT

ರಣಜಿ | ಒಂದೇ ಇನಿಂಗ್ಸ್‌ನಲ್ಲಿ 9 ಅರ್ಧಶತಕ: 120 ವರ್ಷ ಹಳೆಯ ದಾಖಲೆ ಮುರಿದ ಬಂಗಾಳ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 10:12 IST
Last Updated 9 ಜೂನ್ 2022, 10:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಣಜಿ ಟ್ರೋಫಿ ಟೂರ್ನಿ ಪಂದ್ಯದ ಒಂದೇ ಇನಿಂಗ್ಸ್‌ನಲ್ಲಿ ಒಂಬತ್ತು ಬ್ಯಾಟರ್‌ಗಳು ಅರ್ಧಶತಕಗಳನ್ನು ಗಳಿಸಿದ ಹೊಸ ದಾಖಲೆಯನ್ನು ಬಂಗಾಳ ತಂಡವು ನಿರ್ಮಿಸಿತು.

ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಬಂಗಾಳ ತಂಡದ ಮೊದಲ ಕ್ರಮಾಂಕದಿಂದ ಒಂಬತ್ತನೇ ಕ್ರಮಾಂಕದ ಬ್ಯಾಟರ್‌ಗಳು ಅರ್ಧಶತಕದ ಗಡಿ ದಾಟಿದರು.ಜಾರ್ಖಂಡ್ ಎದುರಿನ ಮೊದಲ ಇನಿಂಗ್ಸ್‌ನಲ್ಲಿ ಒಂಬತ್ತನೇ ಬ್ಯಾಟರ್ ಆಕಾಶ್ ದೀಪ್ 18 ಎಸೆತಗಳಲ್ಲಿ ಅಜೇಯ 53 ರನ್ ಗಳಿಸುವುದರೊಂದಿಗೆ ಈ ದಾಖಲೆ ನಿರ್ಮಾಣವಾಯಿತು. ಅದರಲ್ಲಿ ಎಂಟು ಸಿಕ್ಸರ್‌ಗಳಿದ್ದವು.

ಬಂಗಾಳ ತಂಡವು ಮೊದಲಇನಿಂಗ್ಸ್‌ನಲ್ಲಿ 7 ವಿಕೆಟ್‌ ಕಳೆದುಕೊಂಡು ಕಲೆಹಾಕಿದ್ದ 773 ರನ್‌ ಗಳಿಗೆ ಪ್ರತಿಯಾಗಿ ಜಾರ್ಖಂಡ್‌ 298 ರನ್‌ ಗಳಿಗೆ ಆಲೌಟ್‌ ಆಗಿದೆ. ಬಂಗಾಳ ತಂಡ ಇದೀಗ ಎರಡನೇ ಇನಿಂಗ್ಸ್‌ ಆರಂಭಿಸಿದ್ದು ವಿಕೆಟ್‌ ನಷ್ಟವಿಲ್ಲದೆ 17 ರನ್‌ ಗಳಿಸಿದೆ.

ADVERTISEMENT

1893ರಲ್ಲಿ ಆಸ್ಟ್ರೇಲಿಯಾ ಬಳಗದ ಎಂಟು ಮಂದಿ ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ಮತ್ತು ಕೆಂಬ್ರಿಡ್ಜ್‌ ವಿವಿ ವಿರುದ್ಧ ಅರ್ಧಶತಕಗಳನ್ನು ದಾಖಲಿಸಿದ್ದರು.

ಕ್ವಾರ್ಟರ್‌ ಫೈನಲ್‌ ಪಂದ್ಯಗಳಸಂಕ್ಷಿಪ್ತ ಸ್ಕೋರು
ಜಸ್ಟ್ ಕ್ರಿಕೆಟ್ ಮೈದಾನ:
ಬಂಗಾಳ vsಜಾರ್ಖಂಡ್
ಮೊದಲ ಇನಿಂಗ್ಸ್:ಬಂಗಾಳ:
773/7 ಡಿಕ್ಲೇರ್ಡ್,ಜಾರ್ಖಂಡ್: 298/10
ಎರಡನೇ ಇನಿಂಗ್ಸ್: ಬಂಗಾಳ:10/0

ಆಲೂರು ಕ್ರೀಡಾಂಗಣ: ಕರ್ನಾಟಕ vs ಉತ್ತರ ಪ್ರದೇಶ
ಮೊದಲ ಇನಿಂಗ್ಸ್:ಕರ್ನಾಟಕ: 253/10,ಉತ್ತರ ಪ್ರದೇಶ: 155/10
ಎರಡನೇ ಇನಿಂಗ್ಸ್: 114/10,ಉತ್ತರ ಪ್ರದೇಶ: 213/3
ಫಲಿತಾಂಶ:
ಉತ್ತರ ಪ್ರದೇಶಕ್ಕೆ 5 ವಿಕೆಟ್ ಜಯ

ಆಲೂರು ಕ್ರೀಡಾಂಗಣ (2):ಮುಂಬೈ vsಉತ್ತರಾಖಂಡ
ಮೊದಲ ಇನಿಂಗ್ಸ್: ಮುಂಬೈ:
647/8 ಡಿಕ್ಲೇರ್, ಉತ್ತರಾಖಂಡ:114/10
ಎರಡನೇ ಇನಿಂಗ್ಸ್: ಮುಂಬೈ:261/3ಡಿಕ್ಲೇರ್, ಉತ್ತರಾಖಂಡ:69/10
ಫಲಿತಾಂಶ:ಮುಂಬೈಗೆ725ರನ್ ಅಂತರದ ಜಯ

ಆಲೂರು ಕ್ರೀಡಾಂಗಣ (3): ಪಂಜಾಬ್ vs ಮಧ್ಯಪ್ರದೇಶ
ಮೊದಲ ಇನಿಂಗ್ಸ್: ಪಂಜಾಬ್:
219/10, ಮಧ್ಯಪ್ರದೇಶ:397/10
ಎರಡನೇ ಇನಿಂಗ್ಸ್: ಪಂಜಾಬ್:203/10,ಮಧ್ಯಪ್ರದೇಶ 26/0
ಫಲಿತಾಂಶ:ಮಧ್ಯಪ್ರದೇಶಕ್ಕೆ 10 ವಿಕೆಟ್ ಅಂತರದ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.