ADVERTISEMENT

ಇಂಗ್ಲೆಂಡ್‌ ವಿರುದ್ಧದ ಪಿಂಕ್‌ ಬಾಲ್‌ ಟೆಸ್ಟ್‌ಗೆ ಅಹಮದಾಬಾದ್‌ ಆತಿಥ್ಯ

ಪಿಟಿಐ
Published 20 ಅಕ್ಟೋಬರ್ 2020, 14:33 IST
Last Updated 20 ಅಕ್ಟೋಬರ್ 2020, 14:33 IST
ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ   

ಕೋಲ್ಕತ್ತ: ಇಂಗ್ಲೆಂಡ್‌ ವಿರುದ್ಧ ಮುಂದಿನ ವರ್ಷ ನಡೆಯಲಿರುವ ಸರಣಿಯ ಹಗಲುರಾತ್ರಿ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೆ ಅಹ್ಮದಾಬಾದ್‌ ಆತಿಥ್ಯ ವಹಿಸಲಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.

ಜನವರಿ–ಮಾರ್ಚ್‌ ಅವಧಿಯಲ್ಲಿ ಇಂಗ್ಲೆಂಡ್‌ ತಂಡವು ಭಾರತ ತಂಡದ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಹಾಗೂ ಸೀಮಿತ ಓವರ್‌ಗಳ ಸರಣಿಯನ್ನು ಆಡಲು ಭಾರತಕ್ಕೆ ಬರಲಿದೆ.

‘ಹಗಲುರಾತ್ರಿ ಪಂದ್ಯವೊಂದಕ್ಕೆ ಅಹ್ಮದಾಬಾದ್‌ ಆತಿಥ್ಯ ವಹಿಸಲಿದೆ‘ ಎಂದು ಕೋಲ್ಕತ್ತದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಮಾತನಾಡಿದ ಗಂಗೂಲಿ ಹೇಳಿದರು.

ADVERTISEMENT

ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗಿರುವುದರಿಂದ ಸರಣಿಯನ್ನು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಆಯೋಜಿಸುವ ಕುರಿತು ವದಂತಿಗಳಿದ್ದವು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಸದ್ಯ ಯುಎಇಯಲ್ಲಿ ನಡೆಯುತ್ತಿದೆ.

ಭಾರತದಲ್ಲೇ ಸರಣಿ ಆಯೋಜಿಸಲು ಬಿಸಿಸಿಐ ನಿರ್ಧರಿಸಿದ್ದು, ಜೀವಸುರಕ್ಷಾ ವಾತಾವರಣ ನಿರ್ಮಾಣ ಸೇರಿದಂತೆ ಎಲ್ಲ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.

ಟೆಸ್ಟ್‌ ಸರಣಿಯ ಪಂದ್ಯಗಳನ್ನು ಅಹ್ಮದಾಬಾದ್‌, ಧರ್ಮಶಾಲಾ ಹಾಗೂ ಕೋಲ್ಕತ್ತದಲ್ಲಿ ಆಯೋಜಿಸಬಹುದು. ಆದರೆ ಈ ಕುರಿತು ಯಾವುದೇ ತೀರ್ಮಾನ ಅಂತಿಮವಾಗಿಲ್ಲ ಎಂದು ಗಂಗೂಲಿ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.