ADVERTISEMENT

ಐಪಿಎಲ್‌ಗೆ ಸಜ್ಜಾದ ಕೆ.ಎಲ್‌. ರಾಹುಲ್

ಪಿಟಿಐ
Published 18 ಮಾರ್ಚ್ 2024, 23:31 IST
Last Updated 18 ಮಾರ್ಚ್ 2024, 23:31 IST
<div class="paragraphs"><p>ಕೆ.ಎಲ್‌. ರಾಹುಲ್</p></div>

ಕೆ.ಎಲ್‌. ರಾಹುಲ್

   

ನವದೆಹಲಿ: ಲಖನೌ ಸೂಪರ್ ಜೈಂಟ್ಸ್ ನಾಯಕ ಕೆ.ಎಲ್. ರಾಹುಲ್ ಅವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಫಿಟ್‌ನೆಟ್‌ ಪ್ರಮಾಣಪತ್ರವನ್ನು ಪಡೆದಿದ್ದಾರೆ. ಆದರೆ, ಐಪಿಎಲ್‌ನ ಟೂರ್ನಿಯ ಆರಂಭಿಕ ಕೆಲವು ಪಂದ್ಯಗಳಲ್ಲಿ ವಿಕೆಟ್‌ ಕೀಪಿಂಗ್‌ ಮಾಡದಂತೆ ಅವರಿಗೆ ಎನ್‌ಸಿಎ ಸಲಹೆ ನೀಡಿದೆ.

ಹೈದರಾಬಾದ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಆಡಿದ್ದ ರಾಹುಲ್ ಗಾಯದ ಕಾರಣಕ್ಕಾಗಿ ಉಳಿದ ಪಂದ್ಯಗಳಿಗೆ ಅಲಭ್ಯವಾಗಿದ್ದರು. ಮೂರನೇ ಟೆಸ್ಟ್‌ ಪಂದ್ಯಕ್ಕೆ ಬರುವ ನಿರೀಕ್ಷೆ ಇತ್ತಾದರೂ, ಪೂರ್ಣ ಗುಣಮುಖರಾಗದ ಕಾರಣ ಸರಣಿಯ ಉಳಿದ ಪಂದ್ಯಗಳಿಗೆ ವಾಪಸ್‌ ಆಗಿರಲಿಲ್ಲ.

ADVERTISEMENT

ಇದೀಗ ಚೇತರಿಸಿಕೊಂಡಿರುವ ರಾಹುಲ್ ಅವರು, ಎನ್‌ಸಿಎನಲ್ಲಿ ಬ್ಯಾಟಿಂಗ್, ಕೀಪಿಂಗ್ ಮತ್ತು ಔಟ್‌ಫೀಲ್ಡಿಂಗ್ ಅಭ್ಯಾಸ ನಡೆಸುತ್ತಿರುವ ಕಿರು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಐಪಿಎಲ್‌ ಟೂರ್ನಿ ಆಡಲು ಸಜ್ಜಾಗಿದ್ದಾರೆ.

‘ರಾಹುಲ್‌ ಅವರು ಮಾರ್ಚ್ 24ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಉದ್ಘಾಟನಾ ಪಂದ್ಯಕ್ಕಾಗಿ ಜೈಪುರಕ್ಕೆ ಪ್ರಯಾಣಿಸುವ ಮೊದಲು ಅವರು ಗುರುವಾರ (ಮಾರ್ಚ್ 20) ಲಖನೌದಲ್ಲಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆರಂಭದ ಕೆಲ ಪಂದ್ಯಗಳಲ್ಲಿ ಅವರು ಬ್ಯಾಟರ್‌ ಆಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ನಂತರದಲ್ಲಿ ವಿಕೆಟ್‌ ಕೀಪಿಂಗ್‌ ಮಾಡಬಹುದಾಗಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.