ADVERTISEMENT

ಶ್ರೀನಿವಾಸನ್ ಸ್ಮಾರಕ ಟ್ರೋಫಿ: ಅನೀಶ್ವರ್‌ ಗೌತಮ್‌ ದ್ವಿಶತಕ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 19:26 IST
Last Updated 29 ಜುಲೈ 2025, 19:26 IST
ಅನೀಶ್ವರ್ ಗೌತಮ್ 
ಅನೀಶ್ವರ್ ಗೌತಮ್    

ಬೆಂಗಳೂರು: ಅನೀಶ್ವರ್‌ ಗೌತಮ್‌ (200;131ಎ, 4x31, 6x7) ಅವರ ಅಮೋಘ ದ್ವಿಶತಕದ ನೆರವಿನಿಂದ ಬೆಂಗಳೂರು ಸಿಟಿ ಇಲೆವೆನ್ ತಂಡವು ಶ್ರೀನಿವಾಸನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ 23 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳೂರು ವಲಯ ತಂಡದ ವಿರುದ್ಧ ಪ್ರಾಬಲ್ಯ ಸಾಧಿಸಿತು.

ಐಎಎಫ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 42 ರನ್‌ಗಳ ಮುನ್ನಡೆ ಪಡೆದ ಬೆಂಗಳೂರು ತಂಡವು ಅನೀಶ್ವರ್ ಅವರ ಬ್ಯಾಟಿಂಗ್‌ ಬಲದಿಂದ ಎರಡನೇ ಇನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗೆ 268 ರನ್‌ ಗಳಿಸಿತು. ಪಂದ್ಯ ಡ್ರಾನಲ್ಲಿ ಮುಕ್ತಾಯವಾಯಿತು. ಇನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಬೆಂಗಳೂರು ತಂಡ ಮೂರು ಅಂಕ ಮತ್ತು ಮಂಗಳೂರು ತಂಡ 1 ಅಂಕ ಗಳಿಸಿತು. 

ಸಂಕ್ಷಿಪ್ತ ಸ್ಕೋರ್‌: ಐಎಎಫ್‌ ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಬೆಂಗಳೂರು ಸಿಟಿ ಇಲೆವೆನ್‌: 57.1 ಓವರ್‌ಗಳಲ್ಲಿ 218. ಮಂಗಳೂರು ವಲಯ: 51.3 ಓವರ್‌ಗಳಲ್ಲಿ 176. ಎರಡನೇ ಇನಿಂಗ್ಸ್‌: ಬೆಂಗಳೂರು ಸಿಟಿ ಇಲೆವೆನ್‌: 48 ಓವರ್‌ಗಳಲ್ಲಿ 3 ವಿಕೆಟ್‌ಗೆ 268 ( ಅನೀಶ್ವರ್‌ ಗೌರಮ್‌ 200). ಫಲಿತಾಂಶ: ಪಂದ್ಯ ಡ್ರಾ. 

ADVERTISEMENT

ಆಲೂರು ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಅಧ್ಯಕ್ಷರ ಇಲೆವೆನ್‌: 90 ಓವರ್‌ಗಳಲ್ಲಿ 4 ವಿಕೆಟ್‌ಗೆ 408 (ಸಂಜಯ್‌ ಅಶ್ವಿನ್‌ ಔಟಾಗದೇ 122, ಅರ್ಣವ್‌ ಭಾರದ್ವಾಜ್‌ ಔಟಾಗದೇ 95). ತುಮಕೂರು ವಲಯ: 49.5 ಓವರ್‌ಗಳಲ್ಲಿ 86. ಎರಡನೇ ಇನಿಂಗ್ಸ್‌: ಅಧ್ಯಕ್ಷರ ಇಲೆವೆನ್‌: 10 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 58. ಫಲಿತಾಂಶ: ಪಂದ್ಯ ಡ್ರಾ.

ಚಿನ್ನಸ್ವಾಮಿ ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಮೈಸೂರು ವಲಯ: 51 ಓವರ್‌ಗಳಲ್ಲಿ 189. ಶಿವಮೊಗ್ಗ ವಲಯ: 63.2 ಓವರ್‌ಗಳಲ್ಲಿ 173. ಎರಡನೇ ಇನಿಂಗ್ಸ್‌: 39 ಓವರ್‌ಗಳಲ್ಲಿ 2 ವಿಕೆಟ್‌ಗೆ 180. ಫಲಿತಾಂಶ: ಪಂದ್ಯ ಡ್ರಾ

ಆಲೂರು ಕ್ರೀಡಾಂಗಣ: ಮೊದಲ ಇನಿಂಗ್ಸ್‌: ಧಾರವಾಡ ವಲಯ: 88 ಓವರ್‌ಗಳಲ್ಲಿ 357 (ರಾಜೇಂದ್ರ ಡಿ. 106). ಬೆಂಗಳೂರು ವಲಯ: 89.4 ಓವರ್‌ಗಳಲ್ಲಿ 463 (ವಿಶಾಲ್‌ ಓನತ್‌ 203, ವರ್ಷಿಲ್‌ 113). ಫಲಿತಾಂಶ: ಪಂದ್ಯ ಡ್ರಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.