ADVERTISEMENT

ಆರ್ಚರಿ: ಭಾರತ ಮಹಿಳಾ ತಂಡಕ್ಕೆ ಕಂಚು

​ಪ್ರಜಾವಾಣಿ ವಾರ್ತೆ
Published 19 ಮೇ 2022, 14:44 IST
Last Updated 19 ಮೇ 2022, 14:44 IST
ವಿಶ್ವಕಪ್ ಸ್ಟೇಜ್ 2 ಆರ್ಚರಿಯಲ್ಲಿ ಕಂಚಿನ ಪದಕ ಜಯಿಸಿದ ಭಾರತ ಮಹಿಳಾ ತಂಡದ ರಿಧಿ ಪೋರ್, ಕೋಮಲಿಕಾ ಬಾರಿ, ಅಂಕಿತಾ ಭಕತ್   –ಸಾಯ್ ಟ್ವಿಟರ್ ಚಿತ್ರ
ವಿಶ್ವಕಪ್ ಸ್ಟೇಜ್ 2 ಆರ್ಚರಿಯಲ್ಲಿ ಕಂಚಿನ ಪದಕ ಜಯಿಸಿದ ಭಾರತ ಮಹಿಳಾ ತಂಡದ ರಿಧಿ ಪೋರ್, ಕೋಮಲಿಕಾ ಬಾರಿ, ಅಂಕಿತಾ ಭಕತ್   –ಸಾಯ್ ಟ್ವಿಟರ್ ಚಿತ್ರ   

ಗ್ವಾಂಗ್ಜು, ದಕ್ಷಿಣ ಕೊರಿಯಾ (ಪಿಟಿಐ): ಭಾರತ ಮಹಿಳಾ ಆರ್ಚರಿ ತಂಡವು ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಸ್ಟೇಜ್ ಟು ಆರ್ಚರಿಯಲ್ಲಿ ಕಂಚಿನ ಪದಕ ಗಳಿಸಿತು.

ರಿಧಿ ಪೋರ್, ಕೊಮಲಿಕಾ ಬಾರಿ ಮತ್ತು ಅಂಕತಾ ಭಕತ್ ಅವರಿದ್ದ ತಂಡವು ಪ್ಲೇ ಆಫ್‌ನಲ್ಲಿ 6–2(56-52, 54-51, 54-55, 55-54) ರಿಂದ ಚೈನಿಸ್ ತೈಪೆ ವಿರುದ್ಧ ಗೆದ್ದಿತು.

ನಿರಂತರ ಉತ್ತಮ ಸಾಮರ್ಥ್ಯವನ್ನು ತೋರಿದ ಮಹಿಳಾ ತಂಡವು ಮೂರು ಪರ್ಫೆಕ್ಟ್ ಟೆನ್ ಗಳಿಸಿತು. ಮೊದಲ 12 ಬಾಣಗಳ ಗುರಿಯಲ್ಲಿ 4–0ಯಿಂದ ಮುನ್ನಡೆ ಗಳಿಸಿತು. ಮೂರನೇ ಸೆಟ್‌ನಲ್ಲಿ ಎರಡು ಬಾಣಗಳು (8–8) ಕೆಂಪು ವೃತ್ತದಲ್ಲಿ ನಾಟಿದ್ದು ಹಿನ್ನಡೆಗೆ ಕಾರಣವಾದವು.

ADVERTISEMENT

ಮುಂದಿನ ಸೆಟ್‌ನಲ್ಲಿ ತಿರುಗೇಟು ನೀಡಿದ ಭಾರತ ತಂಡವು ಒಂದು ಬಾರಿ ಹತ್ತು ಮತ್ತು ಐದು ಸಲ 9 ಅಂಕಗಳನ್ನು ಗಳಿಸಿತು. ನಂತರದ ಸೆಟ್‌ಗಳಲ್ಲಿ ಯೂ ಪಾರಮ್ಯ ಮೆರೆಯಿತು.

ಕಂಚಿನ ಪದಕದ ಸುತ್ತಿಗೂ ಮುನ್ನ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡವು 2–6ರಿಂದ ದಕ್ಷಿಣ ಕೊರಿಯಾ ವಿರುದ್ಧ ಸೋತಿತ್ತು.

ಪುರುಷರ ವಿಭಾಗದಲ್ಲಿ ಎಂಟರ ಘಟ್ಟದಲ್ಲಿ ಭಾರತವು 2–6 (54-57, 55-52, 53-55, 47-53) ರಿಂದ ಫ್ರಾನ್ಸ್ ವಿರುದ್ಧ ಪರಾಭವಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.