
ಸನ್ನಿ ಲಿಯೋನ್ ಫೋಟೊ ಹಾಕಿ ಫಾಲೋವರ್‌ಗಳ ತಲೆಯಲ್ಲಿ ಹುಳ ಬಿಟ್ಟ ಆರ್. ಅಶ್ವಿನ್!
ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ಆರ್ ಅಶ್ವಿನ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಫೋಟೊ ಒಂದನ್ನು ಹಂಚಿಕೊಂಡಿದ್ದು ಸಾಕಷ್ಟು ಚರ್ಚೆಯಾಗಿತ್ತು.
ಫೋಟೊ ಹಂಚಿಕೊಂಡು ಇದೇನಿರಬಹುದು ಎಂದು ಅಭಿಮಾನಿಗಳ ಹಾಗೂ ಫಾಲೋವರ್‌ಗಳ ತಲೆಯಲ್ಲಿ ಹುಳು ಬಿಟ್ಟಿದ್ದರು.
ಅದಾಗ್ಯೂ ಆರ್ ಅಶ್ವಿನ್ ಅವರ ಪೋಟೊ ಒಗಟನ್ನು ಅಭಿಮಾನಿಗಳು ಬಿಡಿಸಿದ್ದಾರೆ.
ನಟಿ ಸನ್ನಿ ಲಿಯೋನ್ ಹಾಗೂ ತಮಿಳುನಾಡಿನ ಗಲ್ಲಿಯೊಂದರ ಫೋಟೊ ಜೋಡಿಸಿ ಅಶ್ವಿನ್ ಅವರು ನಿಗೂಢ ಅರ್ಥದಲ್ಲಿ ಪೋಸ್ಟ್ ಮಾಡಿದ್ದರು.
ಅಭಿಮಾನಿಗಳ ಪ್ರಕಾರ ಇನ್ನೇನು ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಆರಂಭವಾಗಲಿದ್ದು ಅದಕ್ಕೆ ತಮಿಳುನಾಡಿನ ಕ್ರಿಕೆಟ್ ನವ ಪ್ರತಿಭೆ ಸನ್ನಿ ಸಂಧು ಅವರು ಹರಾಜಿನಲ್ಲಿ ಆಯ್ಕೆಯಾಗಲಿದ್ದಾರೆ ಎಂಬ ಅರ್ಥದಲ್ಲಿ ಹೇಳಿದ್ದಾರೆ.
ಸನ್ನಿ ಜೊತೆಗೆ ಸಂಧು ಎಂದರೆ ತಮಿಳಿನಲ್ಲಿ ಗಲ್ಲಿ ಎಂದರ್ಥ. ಇದನ್ನಿಟ್ಟುಕೊಂಡು ಅಭಿಮಾನಿಗಳು ಅಶ್ವಿನ್ ಅವರ ಪೋಸ್ಟ್‌ಗೆ ಸನ್ನಿ ಸಂಧು ಹೆಸರನ್ನು ತಳುಕು ಹಾಕಿದ್ದಾರೆ.
ಸೇಲಂ ಮೂಲದ ಸನ್ನಿ ಸಂಧು ಅವರು ಆಲ್‌ರೌಂಡರ್ ಆಟಗಾರನಾಗಿ ಬೆಳಕಿಗೆ ಬರುತ್ತಿದ್ದು ಐಪಿಎಲ್‌ನಲ್ಲಿ ಆಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.