ADVERTISEMENT

ಬಾಂಗ್ಲಾ ವಿರುದ್ಧ ಟಾಸ್‌ ಗೆದ್ದ ಟೀಂ ಇಂಡಿಯಾ: ಬೌಲಿಂಗ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 11:36 IST
Last Updated 21 ಸೆಪ್ಟೆಂಬರ್ 2018, 11:36 IST
ಚಿತ್ರ: ಬಿಸಿಸಿಐ ಟ್ವಿಟರ್‌
ಚಿತ್ರ: ಬಿಸಿಸಿಐ ಟ್ವಿಟರ್‌   

ದುಬೈ: ಪಾಕಿಸ್ತಾನವನ್ನು ಸುಲಭವಾಗಿ ಮಣಿಸಿದ ಭಾರತ ತಂಡ ಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿಯ ಸೂಪರ್ 4 ಹಂತದ ಮೊದಲ ಪಂದ್ಯದಲ್ಲಿ ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ.

ಸದ್ಯ ಬಾಂಗ್ಲಾದೇಶದ ವಿರುದ್ಧ ಟಾಸ್‌ ಗೆದ್ದಿರುವ ರೋಹಿತ್‌ ಪಡೆ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಭಾರತದ ಪರಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಗಾಯಗೊಂಡಿರುವ ಕಾರಣಅವರ ಬದಲಿಗೆ ಖಲೀಲ್ ಅಹಮ್ಮದ್, ಸಿದ್ಧಾರ್ಥ್ ಕೌಲ್‌, ರವೀಂದ್ರ ಜಡೇಜಗೆ ಅವಕಾಶ ನೀಡಲಾಗಿದೆ.

ADVERTISEMENT

ಆರಂಭಿಕ ಜೋಡಿ ಶಿಖರ್ ಧವನ್‌ ಮತ್ತು ರೋಹಿತ್ ಶರ್ಮಾ ಲಯ ಕಂಡುಕೊಂಡಿರುವುದು ಭಾರತಕ್ಕೆ ಸಮಾಧಾನ ತಂದಿದೆ.

ಬಲಿಷ್ಠ ಎದುರಾಳಿ: ಎಲ್ಲ ವಿಭಾಗದಲ್ಲೂ ಅತ್ಯುತ್ತಮ ಆಟಗಾರರನ್ನು ಒಳಗೊಂಡಿರುವ ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ.

ತಂಡಗಳು: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧನವ್, ಅಂಬಟಿ ರಾಯುಡು, ದಿನೇಶ್ ಕಾರ್ತಿಕ್‌, ಮಹೇಂದ್ರ ಸಿಂಗ್ ದೋನಿ (ವಿಕೆಟ್ ಕೀಪರ್‌), ಕೇದಾರ್ ಜಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್ ಬೂಮ್ರಾ, ಕುಲದೀಪ್ ಯಾದವ್‌, ಯಜುವೇಂದ್ರ ಚಾಹಲ್‌, ರವೀಂದ್ರ ಜಡೇಜ.

ಬಾಂಗ್ಲಾದೇಶ: ಲಿಟನ್ ದಾಸ್‌ (ನಾಯಕ), ಶಕೀಬ್‌ ಅಲ್‌ ಹಸನ್‌, ತಮೀಮ್ ಇಕ್ಬಾಲ್‌, ಮೊಹಮ್ಮದ್‌ ಮಿಥುನ್‌, ಮುಷ್ಫಿಕುರ್ ರಹೀಮ್‌, ಮಹಮ್ಮದುಲ್ಲಾ, ಮೊಸಾಡೆಕ್‌ ಹೊಸೇನ್‌, ನಜ್ಮುಲ್‌ ಹೊಸೇನ್‌, ಮೆಹೆದಿ ಹಸನ್‌,ರುಬೆಲ್ ಹೊಸೇನ್‌, ಮುಸ್ತಫಿಜುರ್ ರಹಿಮಾನ್‌

ಪಂದ್ಯ ಆರಂಭ: ಸಂಜೆ 5.00
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.