ADVERTISEMENT

ಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿ: ಭಾರತ–ಶ್ರೀಲಂಕಾ ಫೈನಲ್

ಏಜೆನ್ಸೀಸ್
Published 5 ಅಕ್ಟೋಬರ್ 2018, 18:09 IST
Last Updated 5 ಅಕ್ಟೋಬರ್ 2018, 18:09 IST

ಢಾಕಾ: ಭಾರತ ಮತ್ತು ಶ್ರೀಲಂಕಾ ತಂಡಗಳು 19 ವರ್ಷದೊಳ ಗಿನವರ ಏಷ್ಯಾ ಕಪ್‌ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಸೆಣಸಲಿವೆ. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯ ದಲ್ಲಿ ಶ್ರೀಲಂಕಾ ತಂಡ ಅಫ್ವಾನಿಸ್ತಾನವನ್ನು 31 ರನ್‌ಗಳಿಂದ ಮಣಿಸಿತು. ಗುರುವಾರ ನಡೆದಿದ್ದ ಮೊದಲ ಸೆಮಿಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ರೋಚಕ ಎರಡು ರನ್‌ಗಳ ಜಯ ಸಾಧಿಸಿತ್ತು. ಪ್ರಶಸ್ತಿ ಸುತ್ತಿನ ಪಂದ್ಯ ಭಾನುವಾರ ನಡೆಯಲಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಖಾತೆ ತೆರೆಯುವ ಮೊದಲೇ ಎರಡು ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಆದರೆ ನುವಾನಿದು ಫರ್ನಾಂಡೊ (111; 129 ಎಸೆತ, 3 ಸಿಕ್ಸರ್‌, 8 ಬೌಂಡರಿ) ಅವರ ಏಕಾಂಗಿ ಹೋರಾಟದ ಬಲದಿಂದ ತಂಡ ಸವಾ ಲಿನ ಮೊತ್ತ ಕಲೆ ಹಾಕಿತು.

ಕಲಾನ ಪೆರೇರ ಮತ್ತು ನಿಪುಣ್ ಪೆರೇರ ಕ್ರಮವಾಗಿ 22 ಮತ್ತು 27 ರನ್‌ ಗಳಿಸಿ ಫರ್ನಾಂಡೊಗೆ ಸಹಕಾರ ನೀಡಿದರು.

ADVERTISEMENT

ಸಾಮಾನ್ಯ ಗುರಿ ಬೆನ್ನತ್ತಿದ ಅಫ್ಗಾನಿ ಸ್ತಾನದ ಪರ ಅಗ್ರ ಕ್ರಮಾಂಕದ ರಹ ಮಾನುಲ್ಲಾ, ಬಶೀರ್‌ ಖಾನ್‌ ಮತ್ತು ಆರಿಫ್ ಖಾನ್‌ ಉತ್ತಮ ಬ್ಯಾಟಿಂಗ್ ಮಾಡಿದರು. ಮಧ್ಯಮ ಕ್ರಮಾಂಕದ ಕುಸಿತದಿಂದಾಗಿ ತಂಡ ಪತನದ ಹಾದಿ ಹಿಡಿಯಿತು. ಇಜಾಜ್ 37 ರನ್ ಗಳಿಸಿ ಮಿಂಚಿದರು. ದುಲ್ಶನ್‌, ಸೇನಾರತ್ನೆ ಮತ್ತು ಪರನವಿತನ ಎದುರಾಳಿ ತಂಡದ ಪತನಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 50 ಓವರ್‌ಗಳಲ್ಲಿ 7ಕ್ಕೆ 209 (ಫರ್ನಾಂಡೊ 111, ಕಲಾನ ಪೆರೇರ 22, ನಿಪುಣ್ ಪೆರೇರ 27; ಅಬ್ದುಲ್ ರಹಮಾನ್ 42ಕ್ಕೆ3); ಅಫ್ಗಾನಿಸ್ತಾನ: 48.3 ಓವರ್‌ಗಳಲ್ಲಿ 178 (ರಹಮಾನುಲ್ಲಾ ಗುರ್ಬಾಜ್‌ 46, ಬಶೀರ್ ಖಾನ್‌ 27, ಆರಿಫ್ ಖಾನ್‌ 20, ಇಜಾಜ್‌ 37; ಸೇನಾ ರತ್ನೆ 41ಕ್ಕೆ2, ದುಲ್ಶನ್‌ 24ಕ್ಕೆ4, ಪರನವಿತನ 17ಕ್ಕೆ2). ಫಲಿತಾಂಶ: ಶ್ರೀಲಂಕಾಕ್ಕೆ 31 ರನ್‌ಗಳ ಜಯ; ಫೈನಲ್ ‍ಪ್ರವೇಶ. ಫೈನಲ್‌ ಪಂದ್ಯ: ಭಾರತ–ಶ್ರೀಲಂಕಾ; ಅಕ್ಟೋಬರ್‌ 7, ಡಾಕಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.