ADVERTISEMENT

ಅಟ್ಯಪಟ್ಯಾ: 20ರಂದು ಆಯ್ಕೆ ಟ್ರಯಲ್ಸ್‌

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 17:39 IST
Last Updated 15 ಜುಲೈ 2019, 17:39 IST

ಹುಬ್ಬಳ್ಳಿ: ಆಗಸ್ಟ್‌ 10ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯಲಿರುವ 28ನೇ ರಾಷ್ಟ್ರೀಯ ಸಬ್‌ ಜೂನಿಯರ್‌ ಅಟ್ಯಪಟ್ಯಾ ಚಾಂಪಿಯನ್‌ಷಿಪ್‌ಗೆ ಕರ್ನಾಟಕ ಬಾಲಕರ ಹಾಗೂ ಬಾಲಕಿಯರ ತಂಡದ ಆಯ್ಕೆಗೆ ಜುಲೈ 20ರಂದು ಧಾರವಾಡದ ಯುನಿವರ್ಸಿಟಿ ಪಬ್ಲಿಕ್‌ ಶಾಲಾ ಮೈದಾನದಲ್ಲಿ ಟ್ರಯಲ್ಸ್‌ ಜರುಗಲಿದೆ.

ಬೆಳಿಗ್ಗೆ 9 ಗಂಟೆಯಿಂದ ಟ್ರಯಲ್ಸ್ ಆರಂಭವಾಗಲಿದ್ದು, ಕರ್ನಾಟಕ ಅಟ್ಯಪಟ್ಯಾ ಸಂಸ್ಥೆಯಿಂದ ನೋಂದಣಿಯಾದ ಶಾಲೆಗಳು ಮತ್ತು ಸಂಘ ಸಂಸ್ಥೆಗಳು ಪಾಲ್ಗೊಳ್ಳಬಹುದು. 14 ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿದ್ದು, ಮಾಹಿತಿಗೆ ತರಬೇತುದಾರ ಡಾ. ವಿ.ಡಿ. ಪಾಟೀಲ (9480028436) ಅವರನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT