ADVERTISEMENT

ಕ್ರಿಕೆಟ್: ಆಸ್ಟ್ರೇಲಿಯಾ ಜಯಭೇರಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 15:14 IST
Last Updated 11 ಫೆಬ್ರುವರಿ 2022, 15:14 IST
ಶ್ರೀಲಂಕಾದ ಬ್ಯಾಟರ್ ಚಮಿಕಾ ಕರುಣಾರತ್ನೆ ಅವರ ಕ್ಯಾಚ್ ಪಡೆದ ಆಸ್ಟ್ರೇಲಿಯಾದ ಬೌಲರ್ ಜೋಶ್ ಹ್ಯಾಜಲ್‌ವುಡ್  –ಎಎಫ್‌ಪಿ ಚಿತ್ರ
ಶ್ರೀಲಂಕಾದ ಬ್ಯಾಟರ್ ಚಮಿಕಾ ಕರುಣಾರತ್ನೆ ಅವರ ಕ್ಯಾಚ್ ಪಡೆದ ಆಸ್ಟ್ರೇಲಿಯಾದ ಬೌಲರ್ ಜೋಶ್ ಹ್ಯಾಜಲ್‌ವುಡ್  –ಎಎಫ್‌ಪಿ ಚಿತ್ರ   

ಸಿಡ್ನಿ: ಜೋಶ್ ಹ್ಯಾಜಲ್‌ವುಡ್ ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ಅವರ ಅಮೋಘ ಬೌಲಿಂಗ್ ಬಲದಿಂದ ಆಸ್ಟ್ರೇಲಿಯಾ ತಂಡವು ಶುಕ್ರವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾ ಎದುರು 20 ರನ್‌ಗಳಿಂದ ಜಯಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಬೆನ್ ಮ್ಯಾಕ್‌ಡರ್ಮಾಟ್ ಅರ್ಧಶತಕದ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 149 ರನ್ ಗಳಿಸಿತು. ಮಳೆ ಬಂದ ಕಾರಣ ಡಕ್ವರ್ಥ್ ಲೂಯಿಸ್ ನಿಯಮ ಅನ್ವಯಿಸಲಾಯಿತು. ಪರಿಷ್ಕೃತ 142 ರನ್‌ಗಳ ಗುರಿ ಬೆನ್ನಟ್ಟಿದ ಪ್ರವಾಸಿ ಬಳಗವು 19 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 122 ರನ್ ಮಾತ್ರ ಗಳಿಸಿತು. ಆತಿಥೇಯರು ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿದರು.

ಸಂಕ್ಷಿಪ್ತ ಸ್ಕೋರು: ಅಸ್ಟ್ರೇಲಿಯಾ: 20 ಓವರ್‌ಗಳಲ್ಲಿ 9ಕ್ಕೆ 149 (ಬೆನ್ ಮ್ಯಾಕ್‌ಡರ್ಮಾಟ್ 53, ಜೋಶ್ ಇಂಗ್ಲಿಸ್ 24, ಮಾರ್ಕಸ್ ಸ್ಟೊಯಿನಿಸ್ 30, ಚಾಮೀರಾ 38ಕ್ಕೆ2, ಫರ್ನಾಂಡೊ 12ಕ್ಕೆ2, ವಾಣಿಂದು ಹಸರಂಗಾ 38ಕ್ಕೆ3, ಕರುಣಾರತ್ನೆ 22ಕ್ಕೆ2) ಶ್ರೀಲಂಕಾ: 19 ಓವರ್‌ಗಳಲ್ಲಿ 8ಕ್ಕೆ 122 (ಪ್ರಥಮ್ ನಿಸಾಂಕ 36, ದಿನೇಶ್ ಚಾಂಡಿಮಲ್ ಔಟಾಗದೆ 25, ಜೋಷ್ ಹ್ಯಾಜಲ್‌ವುಡ್ 12ಕ್ಕೆ4, ಆ್ಯಡಂ ಜಂಪಾ 18ಕ್ಕೆ3) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 20 ರನ್‌ಗಳ ಜಯ (ಡಕ್ವರ್ಥ್‌‍–ಲೂಯಿಸ್ ಪದ್ಧತಿ)

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.