ADVERTISEMENT

Ind vs Aus Test: ಮೊದಲ ಟೆಸ್ಟ್‌ನಿಂದ ಡೇವಿಡ್‌ ವಾರ್ನರ್‌ ಹೊರಗೆ

ಗಾಯದ ಸಮಸ್ಯೆ

ಏಜೆನ್ಸೀಸ್
Published 9 ಡಿಸೆಂಬರ್ 2020, 3:23 IST
Last Updated 9 ಡಿಸೆಂಬರ್ 2020, 3:23 IST
ಡೇವಿಡ್‌ ವಾರ್ನರ್‌
ಡೇವಿಡ್‌ ವಾರ್ನರ್‌   

ಸಿಡ್ನಿ: ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್‌ ವಾರ್ನರ್‌ ಟೀಂ ಇಂಡಿಯಾ ಎದುರಿನ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡುವ ವೇಳೆ ವಾರ್ನರ್‌ ಗಾಯಗೊಂಡಿದ್ದರು. ತೊಡೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದ ಅವರು ಸೀಮಿತ ಓವರ್‌ಗಳ (ಟಿ20) ಸರಣಿಯಿಂದ ಹೊರಗುಳಿದಿದ್ದರು.

'ಕಡಿಮೆ ಅವಧಿಯಲ್ಲೇ ನನ್ನಲ್ಲಿ ಸಾಕಷ್ಟು ಚೇತರಿಕೆ ಕಂಡುಬಂದಿದೆ, ಸ್ನಿಡಿಯಲ್ಲಿಯೇ ಉಳಿಯುವ ಮೂಲಕ ಪೂರ್ಣ ಪ್ರಮಾಣದ ಫಿಟ್ನೆಸ್‌ ಕಾಯ್ದುಕೊಳ್ಳುವ ಪ್ರಯತ್ನ ಮುಂದುವರಿಸುತ್ತೇನೆ' ಎಂದು ವಾರ್ನರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಅಡಿಲೇಡ್‌ನಲ್ಲಿ ಡಿಸೆಂಬರ್‌ 17ರಿಂದ ಮೊದಲ ಟೆಸ್ಟ್‌ ಆರಂಭವಾಗಲಿದೆ.

'ಗಾಯ ಬಹುತೇಕ ಗುಣವಾಗಿದೆ, ಆದರೆ ಟೆಸ್ಟ್‌ ಪಂದ್ಯದ ಪರಿಸ್ಥಿತಿಗೆ ಶೇ 100ರಷ್ಟು ಸಿದ್ಧವಾಗಿರುವುದನ್ನು ಸ್ವತಃ ನನ್ನ ಮನಸ್ಸಿಗೆ ಮತ್ತು ನನ್ನ ತಂಡಕ್ಕೆ ಸಾಬೀತು ಪಡಿಸಬೇಕಿದೆ' ಎಂದಿದ್ದಾರೆ.

ವಾರ್ನರ್‌ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಈವರೆಗೂ ಸ್ಪಷ್ಟವಾಗಿಲ್ಲ. ಇತ್ತೀಚೆಗಷ್ಟೇ ಭಾರತ ಇಲೆವೆನ್‌ ತಂಡದ ಎದುರು ಶತಕ ಸಿಡಿಸಿದ್ದ ಆಸ್ಟ್ರೇಲಿಯಾ ಎ ತಂಡದ ಕ್ಯಾಮೆರಾನ್‌ ಗ್ರೀನ್‌ಗೆ ಅವಕಾಶ ಸಿಗುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ. ಜೋ ಬರ್ನ್ಸ್‌ ಮತ್ತು ವಿಲ್‌ ಪೌವಸ್ಕಿ ಸಹ ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನಕ್ಕೆ ಅರ್ಹತೆ ಪಡೆಯುವ ಸ್ಪರ್ಧೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.