ADVERTISEMENT

ಸಿಎಬಿಗೆ ಅಭಿಷೇಕ್ ದಾಲ್ಮಿಯಾ ಅಧ್ಯಕ್ಷ

ಪಿಟಿಐ
Published 5 ಫೆಬ್ರುವರಿ 2020, 17:20 IST
Last Updated 5 ಫೆಬ್ರುವರಿ 2020, 17:20 IST
ಅಭಿಷೇಕ್ ದಾಲ್ಮಿಯಾ ಅವರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದಿಸಿದರು. ಕಾರ್ಯದರ್ಶಿ ಸ್ನೇಹಾಶಿಶ್ ಗಂಗೂಲಿ ಇದ್ದಾರೆ –ಪಿಟಿಐ ಚಿತ್ರ
ಅಭಿಷೇಕ್ ದಾಲ್ಮಿಯಾ ಅವರನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಭಿನಂದಿಸಿದರು. ಕಾರ್ಯದರ್ಶಿ ಸ್ನೇಹಾಶಿಶ್ ಗಂಗೂಲಿ ಇದ್ದಾರೆ –ಪಿಟಿಐ ಚಿತ್ರ   

ಕೋಲ್ಕತ್ತ: ಬಂಗಾಳ ಕ್ರಿಕೆಟ್ ಸಂಸ್ಥೆಯ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಧ್ಯಕ್ಷರಾಗಿ ಅಭಿಷೇಕ್ ದಾಲ್ಮಿಯಾ ಅವಿರೋಧವಾಗಿ ಆಯ್ಕೆಯಾದರು.

ಬುಧವಾರ ನಡೆದ ಸಂಸ್ಥೆಯ ಸರ್ವಸದಸ್ಯರ ಸಭೆಯಲ್ಲಿ 38 ವರ್ಷದ ಅಭಿಷೇಕ್ ಅವರನ್ನು ನೇಮಕ ಮಾಡಲಾಯಿತು. ಸೌರವ್ ಗಂಗೂಲಿ ಅವರು ಬಿಸಿಸಿಐ ಅಧ್ಯಕ್ಷರಾದ ನಂತರ ಈ ಸ್ಥಾನ ತೆರವಾಗಿತ್ತು.

ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅವರ ಪುತ್ರ ಅಭಿಷೇಕ್ ಅವರು 2021ರ ನವೆಂಬರ್ 6ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಅವಕಾಶ ವಿದೆ. ಅದರ ನಂತರ ಅವರು ಕೂಲಿಂಗ್ ಆಫ್ (ವಿರಾಮ) ನಿಯಮಕ್ಕೆ ಒಳಪಡಲಿದ್ದಾರೆ. ಸಿಎಬಿಗೆ ಅವರು 18ನೇ ಅಧ್ಯಕ್ಷರಾಗಿದ್ದಾರೆ.

ADVERTISEMENT

ಸೌರವ್ ಅವರ ಅಣ್ಣ, ಹಿರಿಯ ಕ್ರಿಕೆಟಿಗ ಸ್ನೇಹಾಶಿಶ್ ಗಂಗೂಲಿ ಅವರು ನೂತನ ಕಾರ್ಯದರ್ಶಿಯಾಗಿ ನೇಮಕವಾದರು.

ಬುಧವಾರ ಸಂಜೆಯ ವಿಮಾನದಲ್ಲಿ ಮಗಳೊಂದಿಗೆ ಇಂಗ್ಲೆಂಡ್‌ಗೆ ತೆರಳಲು ಸಿದ್ಧರಾಗಿದ್ದ ಸೌರವ್ ಅವರೂ ಸಿಎಬಿಗೆ ಆಗಮಿಸಿ ಅಭಿಷೇಕ್ ಮತ್ತು ಸ್ನೇಹಾಶಿಶ್ ಅವರನ್ನು ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.