ADVERTISEMENT

ಮಾಗಡಿ ಕ್ರಿಕೆಟ್ ಅಕಾಡೆಮಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:28 IST
Last Updated 15 ಅಕ್ಟೋಬರ್ 2020, 6:28 IST
ಬೆಂಗಳೂರಿನಲ್ಲಿ ನಡೆದ 19 ವರ್ಷದೊಳಗಿನವರ ಬಿಐಸಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಗೆದ್ದ ಮಾಗಡಿ ಕ್ರಿಕೆಟ್ ಅಕಾಡೆಮಿ ತಂಡ. ನಿಂತವರು (ಎಡದಿಂದ): ಹರ್ಷ ಪಿ., ಹರ್ಷ, ರೋಹನ್, ದೀಪಕ್, ಪ್ರಜ್ವಲ್, ಪ್ರತೀಕ್, ಲಿಖಿತ್. (ಕುಳಿತವರು): ರೋಹಿತ್‌, ನಕುಲ್‌, ಮಂಜುನಾಥ (ಕೋಚ್‌), ಆದಿತ್ಯ ಮಣಿ (ನಾಯಕ), ವಸಿಷ್ಠ, ತೇಜಸ್‌, ಭುವನ್.

ಬೆಂಗಳೂರು: ನಗರದ ಮಾಗಡಿ ಕ್ರಿಕೆಟ್ ಅಕಾಡೆಮಿ ತಂಡ ಈಚೆಗೆ ನಡೆದ19 ವರ್ಷದೊಳಗಿನವರ ಬಿಐಸಿಸಿ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಬಿಐಸಿಸಿ ಇನ್ಫಿನಿಟಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮಾಗಡಿ ಅಕಾಡೆಮಿ ತಂಡ ಕಪಿಲ್ ಕ್ರಿಕೆಟ್ ಅಕಾಡೆಮಿಯನ್ನು ನಾಲ್ಕು ವಿಕೆಟ್‌ಗಳಿಂದ ಮಣಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಕಪಿಲ್ ಕ್ರಿಕೆಟ್ ಅಕಾಡೆಮಿ 30 ಓವರ್‌ಗಳಲ್ಲಿ 9ಕ್ಕೆ 151 ರನ್ ಗಳಿಸಿತು. ಗುರಿ ಬೆನ್ನತ್ತಿದ ಮಾಗಡಿ ಅಕಾಡೆಮಿ ತಂಡ 28 ಓವರ್‌ಗಳಲ್ಲಿ ಅರು ವಿಕೆಟ್ ಕಳೆದುಕೊಂಡು 152 ರನ್ ಗಳಿಸಿ ಗೆಲುವಿನ ದಡ ಸೇರಿತು.

ಸಂಕ್ಷಿಪ್ತ ಸ್ಕೋರು:ಕಪಿಲ್ ಕ್ರಿಕೆಟ್ ಅಕಾಡೆಮಿ: 30 ಓವರ್‌ಗಳಲ್ಲಿ 9ಕ್ಕೆ 151 (ಅಭಿಷೇಕ್‌ 61, ಶಶಾಂಕ್ 34);ಮಾಗಡಿ ಅಕಾಡೆಮಿ: 28 ಓವರ್‌ಗಳಲ್ಲಿ 6ಕ್ಕೆ152 (ವಸಿಷ್ಠ ರಾಮಪ್ರಿಯ 51, ದೀಪಕ್ 23). ಫಲಿತಾಂಶ:ಮಾಗಡಿ ಅಕಾಡೆಮಿಗೆ 4 ವಿಕೆಟ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.