ADVERTISEMENT

ಬಿಟಿಆರ್ ಶೀಲ್ಡ್ ಕ್ರಿಕೆಟ್‌: ಆಯುಷ್‌ ಆಲ್‌ರೌಂಡ್ ಆಟ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 20:22 IST
Last Updated 1 ಡಿಸೆಂಬರ್ 2018, 20:22 IST

ಬೆಂಗಳೂರು: ಆಯುಷ್‌ ಅವರ ಆಲ್‌ರೌಂಡ್ ಆಟದ ನೆರವಿನಿಂದ ಆಡೆನ್ ಸ್ಕೂಲ್ ತಂಡ ಕೆಎಸ್‌ಸಿಎ ಆಶ್ರಯದ, ಬಿಟಿಆರ್ ಶೀಲ್ಡ್‌ಗಾಗಿ ನಡೆಯುತ್ತಿರುವ 14 ವರ್ಷದೊಳಗಿನವರ ಗುಂಪು 1, ಮೂರನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ಭಾರಿ ಜಯ ಗಳಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಆಡೆನ್ ತಂಡ ಹ್ಯಾಪಿ ವ್ಯಾಲಿ ಸ್ಕೂಲ್‌ ತಂಡವನ್ನು 266 ರನ್‌ಗಳಿಂದ ಮಣಿಸಿತು.

ಸಂಕ್ಷಿಪ್ತ ಸ್ಕೋರು: ಆಡೆನ್ ಸ್ಕೂಲ್‌: 17 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 306 (ನಿಮಾಯ್ ಕೃಷ್ಣ 61, ಆಯುಷ್‌ 150); ಹ್ಯಾಪಿ ವ್ಯಾಲಿ ಸ್ಕೂಲ್‌: 10.2 ಓವರ್‌ಗಳಲ್ಲಿ 40 (ಆಯುಷ್‌ 13ಕ್ಕೆ8). ಫಲಿತಾಂಶ: ಆಡೆನ್ ಶಾಲೆಗೆ 266 ರನ್‌ಗಳ ಜಯ. ಶಾಂತಿಧಾಮ ಶಾಲೆ: 30 ಓವರ್‌ಗಳಲ್ಲಿ 132 (ಅಭಿರಥ್‌ 33ಕ್ಕೆ2, ಅರ್ಜುನ್‌ ಮಯ್ಯ 33ಕ್ಕೆ4, ಆಕಾಶ್‌ 20ಕ್ಕೆ2); ಕೇಂಬ್ರಿಜ್‌ ಪಬ್ಲಿಕ್ ಶಾಲೆ, ಎಚ್‌ಎಸ್ಆರ್‌ ಲೇಔಟ್‌: 22.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 133 (ರಾಮ್‌ ವಿ ಅಜೇಯ 37, ಅರ್ಜುನ್ ಮಯ್ಯ 27). ಫಲಿತಾಂಶ: ಕೇಂಬ್ರಿಜ್‌ ಪಬ್ಲಿಕ್ ಶಾಲೆಗೆ 8 ವಿಕೆಟ್‌ಗಳ ಜಯ. ನ್ಯೂ ಕೇಂಬ್ರಿಜ್ ಶಾಲೆ, ಐಸಿಎಸ್‌ಇ ವಿಜಯನಗರ: 23 ಓವರ್‌ಗಳಲ್ಲಿ 5ಕ್ಕೆ 171 (ವಿವೇಕ್‌ 54; ಭುವನ್‌ 26ಕ್ಕೆ2); ಆರ್‌.ಟಿ ನಗರ ಪಬ್ಲಿಬ್ ಶಾಲೆ: 23 ಓವರ್‌ಗಳಲ್ಲಿ 9ಕ್ಕೆ 142 (ಹಿಮಾಂಶು 56; ಗೌರವ್‌ 28ಕ್ಕೆ2, ಅಬ್ದುಲ್‌ ಬಸಿತ್‌ 10ಕ್ಕೆ2, ಅನಿರುದ್ಧ 14ಕ್ಕೆ2). ಫಲಿತಾಂಶ: ನ್ಯೂ ಕೇಂಬ್ರಿಜ್ ಶಾಲೆಗೆ 29 ರನ್‌ಗಳ ಗೆಲುವು. ವೀನಸ್‌ ಇಂಟರ್‌ನ್ಯಾಷನಲ್ ಸ್ಕೂಲ್‌: 30 ಓವರ್‌ಗಳಲ್ಲಿ 156 (ರಘುವೀರ್‌ 34; ಸಿದ್ಧಾರ್ಥ್ 22ಕ್ಕೆ2, ಲಕ್ಷ್ಯ 35ಕ್ಕೆ3); ಪಿಎಸ್‌ಬಿಬಿ ಲೀಡರ್‌ಷಿಪ್‌ ಅಕಾಡೆಮಿ: 21.1 ಓವರ್‌ಗಳಲ್ಲಿ 87 (ಶರಣ್‌ 15ಕ್ಕೆ2, ಹಿತೇಶ್‌ 6ಕ್ಕೆ2). ಫಲಿತಾಂಶ: ವೀನಸ್ ಶಾಲೆಗೆ 69 ರನ್‌ಗಳ ಗೆಲುವು. ಜ್ಯೋತಿ ಹೈಸ್ಕೂಲ್‌: 23 ಓವರ್‌ಗಳಲ್ಲಿ 93 (ಶ್ರೇಯಮ್‌ 16ಕ್ಕೆ2, ವಿಶ್ವ 19ಕ್ಕೆ2, ಮೋನಿಷ್‌ 15ಕ್ಕೆ3, ಸುಹಾಸ್‌ 11ಕ್ಕೆ2); ಮಹರ್ಷಿ ಸೆಂಟರ್‌ ಆಫ್ ಎಕ್ಸಲೆನ್ಸ್‌: 19 ಓವರ್‌ಗಳಲ್ಲಿ 4ಕ್ಕೆ 96 (ಮಯಂಕ್‌ 21, ಶ್ರೇಯಂ ಅಜೇಯ 22). ಫಲಿತಾಂಶ: ಮಹರ್ಷಿ ಸಂಸ್ಥೆಗೆ ಅರು ವಿಕೆಟ್‌ಗಳ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.