ADVERTISEMENT

ಕ್ರಿಕೆಟ್: ಆತಿಥೇಯರಿಗೆ ಹಸನ್, ಹುಸೇನ್ ಆಸರೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 12:54 IST
Last Updated 1 ಡಿಸೆಂಬರ್ 2022, 12:54 IST
ನಜ್ಮುಲ್ ಹಸನ್ ಶಾಂತೊ  
ನಜ್ಮುಲ್ ಹಸನ್ ಶಾಂತೊ     

ಕಾಕ್ಸ್‌ ಬಜಾರ್, ಬಾಂಗ್ಲಾದೇಶ: ಝಾಕೀರ್ ಹಸನ್ ಮತ್ತು ನಜ್ಮುಲ್ ಹುಸೇನ್ ಶಾಂತೊ ಆತಿಥೇಯ ಬಾಂಗ್ಲಾದೇಶದ ಎ ತಂಡಕ್ಕೆ ಆಸರೆಯಾಗಿದ್ದಾರೆ.

ಶೇಖ್ ಕಮಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನ ಎರಡನೇ ಇನಿಂಗ್ಸ್‌ ಆಡುತ್ತಿರುವ ಬಾಂಗ್ಲಾ ತಂಡವು 63 ಓವರ್‌ಗಳಲ್ಲಿ 1 ವಿಕೆಟ್‌ಗೆ 172 ರನ್ ಗಳಿಸಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರತ ಎ ತಂಡವುಭಾರತ 352 ಮುನ್ನಡೆ ಗಳಿಸಿತ್ತು. ಈ ಮೊತ್ತವವನ್ನು ಚುಕ್ತಾ ಮಾಡಲು ಆತಿಥೇಯರಿಗೆ ಇನ್ನೂ 180ರನ್‌ಗಳ ಅವಶ್ಯಕತೆ ಇದೆ.

ಮೊದಲ ಇನಿಂಗ್ಸ್‌ನಲ್ಲಿ 112 ರನ್‌ಗಳಿಗೆ ಬಾಂಗ್ಲಾ ಎ ತಂಡವು ಆಲೌಟ್ ಆಗಿತ್ತು ಇದರಿಂದಾಗಿ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡುತ್ತಿದ್ದಾರೆ. ಝಕೀರ್ ಹಸನ್ (ಬ್ಯಾಟಿಂಗ್ 82) ಹಾಗೂ ಮೆಹಮುದುಲ್ಲಾ ಹಸನ್ ಜಾಯ್ (21 ರನ್) ಉತ್ತಮ ಆರಂಭ ನೀಡಿದರು.

ADVERTISEMENT

28ನೇ ಓವರ್‌ನಲ್ಲಿ ಸೌರಭ್‌ ಕುಮಾರ್ ಎಸೆತದಲ್ಲಿ ಮೆಹಮುದುಲ್ಲಾ ಔಟಾದರು. ಈ ಹಂತದಲ್ಲಿ ಜೊತೆಗೂಡಿದ ಹಸನ್ ಮತ್ತು ನಜ್ಮುಲ್ (ಬ್ಯಾಟಿಂಗ್ 56) ಮುರಿಯದ ಎರಡನೇ ವಿಕೆಟ್ ಜೊತೆಯಾಟದಲ್ಲಿ 101 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್
ಭಾರತ ಎ:
5ಕ್ಕೆ464 ಡಿಕ್ಲೇರ್ಡ್
ಬಾಂಗ್ಲಾದೇಶ ಎ: 45 ಓವರ್‌ಗಳಲ್ಲಿ 112 (ಮೊಸಾದಿಕ್ ಹುಸೇನ್ 63, ಮುಕೇಶ್ ಕುಮಾರ್ 25ಕ್ಕೆ2, ನವದೀಪ್ ಸೈನಿ 21ಕ್ಕೆ3, ಸೌರಭ್ ಕುಮಾರ್ 23ಕ್ಕೆ4)

ಎರಡನೇ ಇನಿಂಗ್ಸ್
ಬಾಂಗ್ಲಾದೇಶ ಎ:
63 ಓವರ್‌ಗಳಲ್ಲಿ1 ವಿಕೆಟ್‌ಗೆ 172 (ಝಾಕೀರ್ ಹಸನ್ ಬ್ಯಾಟಿಂಗ್ 82, ನಜ್ಮುಲ್ ಹುಸೇನ್ ಶಾಂತೊ ಬ್ಯಾಟಿಂಗ್ 56, ಸೌರಭ್ ಕುಮಾರ್ 45ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.