ADVERTISEMENT

ಬ್ಯಾಸ್ಕೆಟ್‌ಬಾಲ್‌: ಕೋರಮಂಗಲ ಜಯಭೇರಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2022, 17:01 IST
Last Updated 13 ಜುಲೈ 2022, 17:01 IST

ಬೆಂಗಳೂರು: ಗೋಕುಲ್ ಗಳಿಸಿದ 23 ಪಾಯಿಂಟ್ಸ್ ಬಲದಿಂದ ಕೋರಮಂಗಲ ಎಸ್‌ಸಿ ತಂಡವು ರಾಜ್ಯ ಬಿ ಡಿವಿಷನ್‌ ಲೀಗ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಬುಧವಾರ ಕೋರಮಂಗಲ 66–50ರಿಂದ ಬಿಎಸ್‌ಎನ್‌ಎಲ್‌ ತಂಡವನ್ನು ಸೋಲಿಸಿತು. ವಿಜೇತ ತಂಡದ ಅಭಿಷೇಕ್‌ ಜಾನ್ 17 ಪಾಯಿಂಟ್ಸ್ ಕಲೆಹಾಕಿದರು. ಬಿಎಸ್‌ಎನ್‌ಎಲ್ ಪರ ಹರೀಶ್ 11 ಪಾಯಿಂಟ್ಸ್ ಗಳಿಸಿದರು.

ಮತ್ತೊಂದು ಹಣಾಹಣಿಯಲ್ಲಿ ಪ್ರೊಟೆಕ್ ಅಸೋಸಿಯೇಷನ್ ಮೈಸೂರು 71–59ರಿಂದ ರಾಜ್‌ಮಹಲ್ ಬಿ.ಸಿ. ವಿರುದ್ಧ ಗೆದ್ದಿತು.

ADVERTISEMENT

ಪ್ರೊಟೆಕ್ ಅಸೋಸಿಯೇಷನ್ ಮೈಸೂರು ತಂಡಕ್ಕಾಗಿ ಹರಿ 19 ಪಾಯಿಂಟ್ಸ್ ಗಳಿಸಿದರು. ರಾಜ್‌ಮಹಲ್ ತಂಡದ ಪರ ಶಿಶಿರ್ (30) ಅವರು ಮಿಂಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.