ADVERTISEMENT

ಕೂಚ್‌ ಬಿಹಾರ್ ಟ್ರೋಫಿ: ಕರ್ನಾಟಕಕ್ಕೆ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 19:41 IST
Last Updated 26 ನವೆಂಬರ್ 2025, 19:41 IST
<div class="paragraphs"><p>ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌ </p></div>

ಕೂಚ್‌ ಬೆಹಾರ್‌ ಟ್ರೋಫಿ ಕ್ರಿಕೆಟ್‌

   

ಬೆಂಗಳೂರು: ಕರ್ನಾಟಕ ತಂಡವು ಕೂಚ್‌ ಬಿಹಾರ್ ಟ್ರೋಫಿ ಎಲೈಟ್‌ ಸಿ ಗುಂಪಿನ ಪಂದ್ಯದಲ್ಲಿ ಬುಧವಾರ ಹಿಮಾಚಲ ‍ಪ್ರದೇಶ ತಂಡವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 148 ರನ್‌ ಗುರಿ ಪಡೆದ ರಾಜ್ಯ ತಂಡವು ಅಂತಿಮ ದಿನ 40.1 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಗುರಿ ತಲುಪಿತು.

ADVERTISEMENT

ಆತಿಥೇಯ ತಂಡವು ಮಂಗಳವಾರ 30 ಓವರ್‌ಗಳಲ್ಲಿ 3 ವಿಕೆಟ್‌ಗೆ 98 ರನ್‌ ಗಳಿಸಿತ್ತು. ನಾಯಕ ಮಣಿಕಂಠ ಶಿವಾನಂದ (ಔಟಾಗದೇ 32; 42ಎ, 4x5) ಹಾಗೂ ಸಿದ್ಧಾರ್ಥ್‌ ಅಖಿಲ್‌ (ಔಟಾಗದೇ 32; 54ಎ, 4x3) ಅವರು ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 64 ರನ್‌ ಸೇರಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಹಿಮಾಚಲ ಪ್ರದೇಶ: 162 ಮತ್ತು 182; ಕರ್ನಾಟಕ: 197 ಮತ್ತು 40.1 ಓವರ್‌ಗಳಲ್ಲಿ 3 ವಿಕೆಟ್‌ಗೆ 148 (ಮಣಿಕಂಠ ಶಿವಾನಂದ ಔಟಾಗದೇ 32, ಸಿದ್ಧಾರ್ಥ್‌ ಅಖಿಲ್‌ ಔಟಾಗದೇ 32).

ಫಲಿತಾಂಶ: ಕರ್ನಾಟಕ ತಂಡಕ್ಕೆ 7 ವಿಕೆಟ್‌ಗಳ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.