ADVERTISEMENT

ಕ್ರಿಕೆಟ್‌: ರೆಲ್ವೇಸ್‌ ತಂಡಕ್ಕೆ ಭರ್ಜರಿ ಜಯ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2020, 20:09 IST
Last Updated 22 ಫೆಬ್ರುವರಿ 2020, 20:09 IST

ಉನಾ, ಹಿಮಾಚಲ ಪ್ರದೇಶ: ನಾಯಕಿ ಮಿಥಾಲಿ (121, 121ಎ, 12 ಬೌಂ, 1ಸಿ) ಮತ್ತು ಆರಂಭ ಆಟಗಾರ್ತಿ ಪೂನಂ ರಾವುತ್‌ (94, 10 ಬೌಂ) ಅವರ ಭರ್ಜರಿ ಆಟದ ನೆರವಿನಿಂದ ರೈಲ್ವೆ ತಂಡ, ಮಹಿಳಾ ಸೀನಿಯರ್‌ ಏಕದಿನ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಕರ್ನಾಟಕ ತಂಡವನ್ನು 191 ರನ್‌ಗಳಿಂದ ಸುಲಭವಾಗಿ ಸೋಲಿಸಿತು.

ಇಂದಿರಾ ಕ್ರೀಡಾಂಗಣದಲ್ಲಿ ನಡೆದ ಪಂಧ್ಯದಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ರೈಲ್ವೆ ತಂಡ 50 ಓವರುಗಳಲ್ಲಿ 5 ವಿಕೆಟ್‌ಗೆ 266 ರನ್‌ಗಳ ದೊಡ್ಡ ಮೊತ್ತ ಪೇರಿಸಿತು. ಕೇವಲ 13 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ರೈಲ್ವೆ ತಂಡವನ್ನು ಮಿಥಾಲಿ ಮತ್ತು ಪೂನಂ ಮೂರನೇ ವಿಕೆಟ್‌ಗೆ 220 ರನ್‌ ಸೇರಿಸಿ ಹಳಿಗೆ ಸೇರಿಸಿದರಲ್ಲದೇ ರನ್‌ ವೇಗ ಹೆಚ್ಚಿಸಿದರು.

ಕರ್ನಾಟಕ 39 ಓವರುಗಳಲ್ಲಿ 76 ರನ್‌ಗಳಿಗೆ ಕುಸಿಯಿತು. ಎರಡು ವಿಕೆಟ್‌ ಪಡೆದಿದ್ದ ಅಕಾಂಕ್ಷಾ ಕೊಹ್ಲಿ ಗಳಿಸಿದ 19 ರನ್‌ಗಳೇ ತಂಡದ ಪರ ಅಧಿಕ ಎನಿಸಿತು. 17 ಇತರೆ ರನ್‌ಗಳಿದ್ದವು.

ADVERTISEMENT

ಸ್ಕೋರುಗಳು: ರೈಲ್ವೆ: 50 ಓವರುಗಳಲ್ಲಿ 5 ವಿಕೆಟ್‌ಗೆ 266 (ಪೂನಂ ರಾವುತ್‌ 94, ಮಿಥಾಲಿ 121; ಮೋನಿಕಾ ಸಿ.ಪಟೇಲ್‌ 52ಕ್ಕೆ3, ಅಕಾಂಕ್ಷಾ ಕೊಹ್ಲಿ 57ಕ್ಕೆ2); ಕರ್ನಾಟಕ: 39 ಓವರುಗಳಲ್ಲಿ 76 (ಪ್ರೀತಿ ಆರ್‌.ಬೋಸ್‌ 12ಕ್ಕೆ3, ಸ್ವಾಗತಿಕಾ ಬೋಸ್‌ 6ಕ್ಕೆ2, ಏಕ್ತಾ ಬಿಷ್ಟ್‌ 17ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.