ADVERTISEMENT

ಹೈಕೋರ್ಟ್‌ ಮೊರೆಹೋದ ಗಂಗೂಲಿ

ಪಿಟಿಐ
Published 12 ಜುಲೈ 2021, 20:30 IST
Last Updated 12 ಜುಲೈ 2021, 20:30 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ಮುಂಬೈ: ತಮ್ಮ ವ್ಯವಸ್ಥಾಪನಾ ಕಂಪನಿಗಳು ನೀಡಬೇಕಾಗಿರುವ ಪರಿಹಾರ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಲು ಸೂಚಿಸುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಬಾಂಬೆ ಹೈಕೋರ್ಟ್‌ಗೆ ಮೊರೆಹೋಗಿದ್ದಾರೆ. ಪರ್ಸೆಪ್ಟ್ ಟ್ಯಾಲೆಂಟ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್ ಮತ್ತು ಪರ್ಸೆಪ್ಟ್ ಡಿ ಮಾರ್ಕ್‌ ಇಂಡಿಯಾ ಲಿಮಿಟೆಡ್‌ ಕಂಪನಿ ಪರಿಹಾರ ನೀಡುವಂತೆ 2018ರಲ್ಲಿ ಮಧ್ಯಂತರ ನ್ಯಾಯಮಂಡಳಿ ಸೂಚಿಸಿತ್ತು. ಈ ಆದೇಶವನ್ನು ಪಾಲಿಸುವಂತೆ ಸೂಚಿಸಲು ಅವರು ಕೋರಿದ್ದಾರೆ.

ಎರಡೂ ಕಂಪನಿಗಳಿಂದ ಬಡ್ಡಿ ಸಮೇತವಾಗಿ ಒಟ್ಟು ₹ 36 ಕೋಟಿ ಪರಿಹಾರ ಮೊತ್ತದ ರೂಪದಲ್ಲಿ ಗಂಗೂಲಿ ಅವರಿಗೆ ಸಿಬೇಕಾಗಿದೆ. ಕಂಪನಿಗಳಿಗಾಗಿ ಹಾಜರಾದ ವಕೀಲ ಶಾರ್ದೂಲ್ ಸಿಂಗ್ ಇದೇ 20ರ ಒಳಗಾಗಿ ಎರಡೂ ಕಂಪನಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಲಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT