ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿವಿಧ ವಿಭಾಗಗಳಲ್ಲಿರುವ ಸಿಬ್ಬಂದಿಗೆ ಬಾಕಿಯಿದ್ದ ದಿನಭತ್ಯೆಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ಜನವರಿಯಿಂದ ದಿನಭತ್ಯೆ ನೀಡಿರಲಿಲ್ಲ.
ದೇಶಿ ಟೂರ್ನಿಗಳ ಭತ್ಯೆ ನಿಯಮವನ್ನು ಪರಿಷ್ಕರಣೆಗೊಳಿಸುವ ಕಾರ್ಯಕ್ಕೆ ಬಿಸಿಸಿಐ ಮುಂದಾಗಿದೆ. ಈಪ್ರಕ್ರಿಯೆಯಲ್ಲಿ ಸಿಬ್ಬಂದಿಯ ಭತ್ಯೆಯನ್ನು ಮಂಜೂರು ಮಾಡಲಾಗಿದೆ.
ಪ್ರಸ್ತುತ ನಿಯಮದ ಪ್ರಕಾರ ಕಡಿಮೆ ಅವಧಿಯ (4 ದಿನಗಳವರೆಗೆ) ಪ್ರವಾಸಗಳಿಗೆ ದಿನವೊಂದಕ್ಕೆ ₹ 15 ಸಾವಿರ ಮತ್ತು ದೀರ್ಘ ಅವಧಿಯ ಪ್ರವಾಸಗಳಲ್ಲಿ ಅಂದರೆ, ಐಪಿಎಲ್, ಮಹಿಳಾ ಪ್ರೀಮಿಯರ್ ಲೀಗ್ ಮತ್ತು ಭಾರತದಲ್ಲಿ ನಡೆಯುವ ಐಸಿಸಿ ಟೂರ್ನಿಗಳಿಗೆ ₹ 10 ಸಾವಿರ ನೀಡಲಾಗುತ್ತದೆ. ಸಾಂದರ್ಭಿಕ ಭತ್ಯೆಯಾಗಿ ₹ 7500 ಕೂಡ ಒಂದು ಬಾರಿ ನೀಡಲಾಗುತ್ತದೆ.
ಮಂಡಳಿಯ ಹಣಕಾಸು, ಕಾರ್ಯಯೋಜನೆ ಮತ್ತು ಮಾಧ್ಯಮ ವಿಭಾಗದ ಸಿಬ್ಬಂದಿಗೆ ವೇತನ ನೀಡಿರಲಿಲ್ಲ. ಐಪಿಎಲ್ ಮತ್ತು ಡಬ್ಲ್ಯುಪಿಎಲ್‌ನಲ್ಲಿ ಕೆಲಸ ನಿರ್ವಹಿಸಿದ್ದ ಸಿಬ್ಬಂದಿಗೆ ಇದುವರೆಗೆ ಯಾವುದೇ ಭತ್ಯ ಲಭಿಸಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.