ADVERTISEMENT

BCCI 15 ವರ್ಷದೊಳಗಿನವರ ಏಕದಿನ ಕ್ರಿಕೆಟ್‌: ಕರ್ನಾಟಕ ಬಾಲಕಿಯರಿಗೆ ಮಣಿದ ಅಸ್ಸಾಂ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 19:55 IST
Last Updated 6 ಜನವರಿ 2026, 19:55 IST
ಕಶ್ವಿ ಕಂಡಿಕೊಪ್ಪ
ಕಶ್ವಿ ಕಂಡಿಕೊಪ್ಪ   

ಬೆಂಗಳೂರು: ನೈನಿಶಾ ರೆಡ್ಡಿ ಪಾಟೀಲ್‌ (24ಕ್ಕೆ2) ಹಾಗೂ ತನುಶ್ರೀ ಆರ್‌. (11ಕ್ಕೆ2) ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 15 ವರ್ಷದೊಳಗಿನ ಬಾಲಕಿಯರ ಏಕದಿನ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಅಸ್ಸಾಂ ತಂಡವನ್ನು 99 ರನ್‌ಗಳಿಗೆ ನಿಯಂತ್ರಿಸಿತು. ಬಳಿಕ, 15.1 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 100 ರನ್‌ ಗಳಿಸಿ, 9 ವಿಕೆಟ‌್ಗಳ ಸುಲಭ ಜಯ ಸಾಧಿಸಿತು.

ಕೋಲ್ಕತ್ತದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದ ಅಸ್ಸಾಂ ತಂಡವು ನೈನಿಶಾ ಹಾಗೂ ತನುಶ್ರೀ ಅವರ ಬೌಲಿಂಗ್‌ ಎದುರಿಸುವಲ್ಲಿ ತಿಣುಕಾಡಿತು. ಆರಂಭದಿಂದಲೂ ಸತತ ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಆರಾಧ್ಯಾ ದತ್ತ (30) ಹಾಗೂ ವೈಭವಿ ದಾಸ್‌ (31) ಆಸರೆಯಾದರು. ಈ ಜೋಡಿಯು ನಾಲ್ಕನೇ ವಿಕೆಟ್‌ಗೆ 69 ರನ್‌ ಜೊತೆಯಾಟವಾಡಿತು. ಅದರಿಂದಾಗಿ, ತಂಡವು ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 99 ರನ್‌ ಗಳಿಸಿತು.

ಸುಲಭ ಗುರಿ ಬೆನ್ನಟ್ಟಿದ ರಾಜ್ಯ ತಂಡವು ನಾಯಕಿ ಕಶ್ವಿ ಕಂಡಿಕೊಪ್ಪ (ಔಟಾಗದೇ 60; 46ಎ) ಹಾಗೂ ಒ.ವೈ.ರೋಹಿಣಿ ದೇಚಮ್ಮ (ಔಟಾಗದೇ 30) ಅವರ ಆಟದ ಬಲದಿಂದ 119 ಎಸೆತ ಬಾಕಿ ಇರುವಂತೆಯೇ ಜಯ ಸಾಧಿಸಿತು.

ADVERTISEMENT

ಸಂಕ್ಷಿಪ್ತ ‌ಸ್ಕೋರು: ಅಸ್ಸಾಂ: 35 ಓವರ್‌ಗಳಲ್ಲಿ 5 ವಿಕೆಟ್‌ಗೆ 99 (ಆರಾಧ್ಯಾ ದತ್ತ 30, ವೈಭವಿ ದಾಸ್‌ 31; ನೈನಿಶಾ ರೆಡ್ಡಿ ಪಾಟೀಲ್‌ 24ಕ್ಕೆ2, ತನುಶ್ರೀ ಆರ್‌. 11ಕ್ಕೆ2). ಕರ್ನಾಟಕ: 15.1 ಓವರ್‌ಗಳಲ್ಲಿ 1 ವಿಕೆಟ್‌ಗೆ 100 (ಕಶ್ವಿ ಕಂಡಿಕೊಪ್ಪ ಔಟಾಗದೇ 60, ಒ.ವೈ.ರೋಹಿಣಿ ದೇಚಮ್ಮ ಔಟಾಗದೇ 30).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.