ADVERTISEMENT

ಐಪಿಎಲ್‌: ಬಂಗಾಳಿ ಭಾಷೆಯಲ್ಲಿ ವೀಕ್ಷಕ ವಿವರಣೆ

ಪಿಟಿಐ
Published 9 ಅಕ್ಟೋಬರ್ 2020, 16:31 IST
Last Updated 9 ಅಕ್ಟೋಬರ್ 2020, 16:31 IST
ಐಪಿಎಲ್‌ ಟ್ರೋಫಿ
ಐಪಿಎಲ್‌ ಟ್ರೋಫಿ   

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್ (ಐಪಿಎಲ್‌) ಟೂರ್ನಿಯ ವೀಕ್ಷಕ ವಿವರಣೆಯು ಇಂದಿನಿಂದ (ಅಕ್ಟೋಬರ್ 10)ಬಂಗಾಳಿ ಭಾಷೆಯಲ್ಲೂ ಆರಂಭವಾಗಲಿದೆ. ಕ್ರಿಕೆಟಿಗರಾದ ಮನೋಜ್‌ ತಿವಾರಿ, ಲಕ್ಷ್ಮಿರತನ್‌ ಶುಕ್ಲಾ ಹಾಗೂ ಸರದಿಂದು ಮುಖರ್ಜಿ ವೀಕ್ಷಕ ವಿವರಣಾಕಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪಂದ್ಯಗಳ ವೀಕ್ಷಕ ವಿವರಣೆ ಲಭ್ಯವಾಗಲಿದೆ. ತಿವಾರಿ ಹಾಗೂ ಶುಕ್ಲಾ ಅವರಿಗೆ ಐಪಿಎಲ್‌ನಲ್ಲಿ ಆಡಿದ ಅನುಭವ ಇದೆ.

‘ಹಿಂದಿನಐಪಿಎಲ್ ಆವೃತ್ತಿಗಳ ಭಾಗವಾಗಿದ್ದ ನಾನು, ಈ ಬಾರಿ ವೀಕ್ಷಕ ವಿವರಣೆಕಾರನಾಗಿ ಪಾಲ್ಗೊಳ್ಳಲು ಉತ್ಸುಕನಾಗಿದ್ದೇನೆ‘ ಎಂದು ಶುಕ್ಲಾ ಹೇಳಿದ್ದಾರೆ. ಮನೋಜ್‌ ತಿವಾರಿ ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.