ನವದೆಹಲಿ: ಐಪಿಎಲ್ ವಿಜಯೋತ್ಸವದ ವೇಳೆ ಅನುಸರಿಸಬೇಕಾದ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮುಂದಾಗಿದೆ. ಇದೇ ಶನಿವಾರ ನಡೆಯಲಿರುವ ಅಪೆಕ್ಸ್ ಕೌನ್ಸಿಲ್ ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಈ ವಿಷಯವೂ ಒಂದಾಗಿದೆ.
ಜೂನ್ 4 ರಂದು ಆರ್‌ಸಿಬಿಯ ಐಪಿಎಲ್ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಅಭಿಮಾನಿಗಳು ಅಪಾರಸಂಖ್ಯೆಯಲ್ಲಿ ಸೇರಿ ಕಾಲ್ತುಳಿತ ಸಂಭವಿಸಿದ್ದರಿಂದ 11 ಮಂದಿ ಮೃತಪಟ್ಟಿದ್ದರು. 56 ಮಂದಿ ಗಾಯಾಳಾಗಿದ್ದರು.
ಮುನ್ನೆಚ್ಚರಿಕೆ ವಹಿಸಿ ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಬೇಕಿತ್ತು ಎಂದು ಬಿಸಿಸಿಐ ಹೇಳಿತ್ತು. ಈಗ ವಿಜಯೋತ್ಸವಗಳಿಗೆ ಮಾರ್ಗಸೂಚಿ ಕುರಿತು ಸಭೆಯಲ್ಲಿ ಚರ್ಚಿ ಸಲಾಗುವುದು ಎಂದು ಮಂಡಳಿಯ ಮೂಲವೊಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.