ADVERTISEMENT

ಸಚಿನ್‌ ಜನ್ಮದಿನಕ್ಕೆ ಹಾಸ್ಯಗಾರನ ಹಾರೈಕೆ!

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 20:01 IST
Last Updated 24 ಏಪ್ರಿಲ್ 2020, 20:01 IST
ಹಾಸ್ಯ ಕಲಾವಿದ ವಿಕ್ರಂ ಸತಾಯಾ ಅವರೊಂದಿಗೆ ಸಚಿನ್ ತೆಂಡೂಲ್ಕರ್  –ಟ್ವಿಟರ್ ಚಿತ್ರ
ಹಾಸ್ಯ ಕಲಾವಿದ ವಿಕ್ರಂ ಸತಾಯಾ ಅವರೊಂದಿಗೆ ಸಚಿನ್ ತೆಂಡೂಲ್ಕರ್  –ಟ್ವಿಟರ್ ಚಿತ್ರ   

ಮುಂಬೈ: ‘ಸತತ 24 ವರ್ಷ ನೀವು ಪ್ರತಿ ಪಂದ್ಯದಲ್ಲಿಯೂ ಚೆನ್ನಾಗಿ ಆಡಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಲೇ ನನ್ನ ತಲೆಯ ಎಲ್ಲ ಕೂದಲು ಉದುರಿದವು. ಈಗ ಏನೂ ಕಳೆದುಕೊಳ್ಳುವ ಭಯವಿಲ್ಲ. ನಿರ್ಭೀತಿಯಿಂದ ನಿಮಗೆ ಶುಭ ಹಾರೈಸುತ್ತಿದ್ದೇನೆ. ಹ್ಯಾಪಿ ಬರ್ತಡೆ ಸಚಿನ್...’

ಸ್ಟ್ಯಾಂಡ್‌ ಅಪ್ ಕಾಮೆಡಿಯನ್ ಮತ್ತು ಸಚಿನ್ ಸ್ನೇಹಿತ ವಿಕ್ರಂ ಸತಾಯಾ ಅವರು ಶುಕ್ರವಾರ ಟ್ವೀಟ್ ಮಾಡಿರುವ ಈ ಸಂದೇಶವು ಬಹಳಷ್ಟು ಮಂದಿಯ ಗಮನ ಸೆಳೆಯುತ್ತಿದೆ. ಸಚಿನ್ ಮತ್ತು ತಾವು ಇರುವ ಚಿತ್ರವನ್ನೂ ಅವರು ಟ್ವಿಟರ್‌ನಲ್ಲಿ ಹಾಕಿದ್ದಾರೆ. 47ನೇ ವಸಂತ ಪೂರೈಸಿದ ಮಾಸ್ಟರ್ ಬ್ಲಾಸ್ಟರ್ ಈ ಬಾರಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿಲ್ಲ. ಕೊವಿಡ್ –19 ಸೋಂಕು ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಿರುವ ಅವರು ಲಾಕ್‌ಡೌನ್‌ ಪಾಲಿಸುತ್ತಿದ್ದಾರೆ.

‘ಜನ್ಮದಿನವನ್ನು ನಾನು ಕೊರೊನಾ ಯೋಧರಿಗೆ ಅರ್ಪಿಸುತ್ತೇನೆ’ ಎಂದು ಗುರುವಾರ ಸಚಿನ್ ಹೇಳಿದ್ದರು. ಬೆಳಿಗ್ಗೆ ತಾಯಿಗೆ ನಮಸ್ಕರಿಸಿ ದಿನವನ್ನು ಆರಂಭಿಸಿರುವುದಾಗಿ ಟ್ವೀಟ್‌ನಲ್ಲಿ ಬರೆದು, ಚಿತ್ರವನ್ನೂ ಹಾಕಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್ ಅವರಿಗೆ ಹಲವರು ಶುಭಾಶಯ ಕೋರಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.