ADVERTISEMENT

ಐಸಿಸಿ ಟಿ20 ಬೌಲಿಂಗ್ ರ್‍ಯಾಂಕಿಂಗ್‌: ಬಿಷ್ಣೋಯಿ, ಅರ್ಷದೀಪ್‌ಗೆ ಬಡ್ತಿ

ಪಿಟಿಐ
Published 10 ಸೆಪ್ಟೆಂಬರ್ 2025, 17:05 IST
Last Updated 10 ಸೆಪ್ಟೆಂಬರ್ 2025, 17:05 IST
ಅರ್ಷದೀಪ್‌ ಸಿಂಗ್‌
ಅರ್ಷದೀಪ್‌ ಸಿಂಗ್‌   

ದುಬೈ: ಭಾರತ ತಂಡದ ಸ್ಪಿನ್ನರ್‌ ರವಿ ಬಿಷ್ಣೋಯಿ ಹಾಗೂ ವೇಗಿ ಅರ್ಷದೀಪ್‌ ಸಿಂಗ್‌ ಅವರು ಬುಧವಾರ ಬಿಡುಗಡೆಯಾದ ಐಸಿಸಿ ಟಿ20 ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಕ್ರಮವಾಗಿ ಆರು ಮತ್ತು 10ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ವರುಣ್‌ ಚಕ್ರವರ್ತಿ ಅವರು ನಾಲ್ಕನೇ ಕ್ರಮಾಂಕದಲ್ಲಿಯೇ ಉಳಿದಿದ್ದು, ಭಾರತದ ಅಗ್ರಮಾನ್ಯ ಬೌಲರ್‌ ಎನಿಸಿದ್ದಾರೆ. ಅಕ್ಷರ್‌ ಪಟೇಲ್‌ ಅವರು ಒಂದು ಸ್ಥಾನ ಬಡ್ತಿಯೊಂದಿಗೆ 13ನೇ ಕ್ರಮಾಂಕದ ಪಡೆದಿದ್ದಾರೆ.

ಬ್ಯಾಟರ್‌ಗಳ ವಿಭಾಗದಲ್ಲಿ ಅಭಿಷೇಕ್‌ ಶರ್ಮಾ ಮೊದಲ ರ್‍ಯಾಂಕ್‌ನಲ್ಲಿ ಮುಂದುವರಿದಿದ್ದಾರೆ. ತಿಲಕ್‌ ವರ್ಮಾ (2ನೇ) ಹಾಗೂ ಸೂರ್ಯಕುಮಾರ್‌ ಯಾದವ್‌ (6ನೇ) ಸ್ಥಾನ ಉಳಿಸಿಕೊಂಡಿದ್ದಾರೆ. ಯಶಸ್ವಿ ಜೈಸ್ವಾಲ್‌ 11ನೇ ಸ್ಥಾನಕ್ಕೆ ಕುಸಿದಿದ್ದಾರೆ.

ADVERTISEMENT

ಆಲ್‌ರೌಂಡರ‌್ಗಳ ವಿಭಾಗದಲ್ಲಿ ಹಾರ್ದಿಕ್‌ ಪಾಂಡ್ಯ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.