
ನವದೆಹಲಿ: ಕೊಲಂಬೊದಲ್ಲಿ ನಡೆದ ಫೈನಲ್‌ನಲ್ಲಿ ನೇಪಾಳವನ್ನು ಏಳು ವಿಕೆಟ್‌ಗಳಿಂದ ಸೋಲಿಸಿ, ಚೊಚ್ಚಲ ಅಂಧರ ಟಿ20 ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳೆಯರ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿಯಾದರು.
ತಂಡದ ಸದಸ್ಯರು ಪ್ರಧಾನಿ ಮೋದಿ ಅವರಿಗೆ ಹಸ್ತಾಕ್ಷರವಿರುವ ಬ್ಯಾಟ್ ಅನ್ನು ನೀಡಿದರು. ಪ್ರಧಾನಿ ಮೋದಿ ಸಹ ಚೆಂಡಿನ ಮೇಲೆ ಹಸ್ತಾಕ್ಷರ ಹಾಕಿಕೊಟ್ಟರು.
ವಿಜಯಶಾಲಿ ಭಾರತ ತಂಡವನ್ನು ಅವರ ಐತಿಹಾಸಿಕ ಸಾಧನೆಗಾಗಿ ಪ್ರಧಾನಿ ಮೋದಿ ಶ್ಲಾಘಿಸಿದರು.
‘ಚೊಚ್ಚಲ ಅಂಧ ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ ಭಾರತೀಯ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು! ಸರಣಿಯಲ್ಲಿ ಅವರು ಅಜೇಯರಾಗಿ ಉಳಿದಿರುವುದು ಶ್ಲಾಘನೀಯ’ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.
‘ಇದು ನಿಜಕ್ಕೂ ಐತಿಹಾಸಿಕ ಕ್ರೀಡಾ ಸಾಧನೆ, ಕಠಿಣ ಪರಿಶ್ರಮ, ತಂಡದ ಕೆಲಸ ಮತ್ತು ದೃಢಸಂಕಲ್ಪದ ಉಜ್ವಲ ಉದಾಹರಣೆ. ಪ್ರತಿಯೊಬ್ಬ ಆಟಗಾರ್ತಿಯೂ ಚಾಂಪಿಯನ್! ತಂಡದ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು. ಈ ಸಾಧನೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ’ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.