ADVERTISEMENT

ಪಾಕಿಸ್ತಾನ: ಕ್ರೀಡಾಂಗಣದ ಬಳಿ ಬಾಂಬ್‌ ಸ್ಫೋಟ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 6:23 IST
Last Updated 6 ಫೆಬ್ರುವರಿ 2023, 6:23 IST
ಬಾಬರ್ ಆಜಂ
ಬಾಬರ್ ಆಜಂ   

ಕ್ವೆಟ್ಟಾ: ಬಾಬರ್ ಅಜಂ ಮತ್ತು ಶಾಹಿದ್‌ ಆಫ್ರಿದಿ ಒಳಗೊಂಡಂತೆ ಪಾಕಿಸ್ತಾನದ ಪ್ರಮುಖ ಕ್ರಿಕೆಟಿಗರು ಇದ್ದಂತಹ ಕ್ರೀಡಾಂಗಣದ ಸಮೀಪ ಬಾಂಬ್‌ ಸ್ಫೋಟಗೊಂಡ ಘಟನೆ ಭಾನುವಾರ ನಡೆದಿದೆ.

ಪಾಕಿಸ್ತಾನ ಸೂಪರ್‌ ಲೀಗ್‌ನ (ಪಿಎಸ್‌ಎಲ್‌) ಪ್ರದರ್ಶನ ಪಂದ್ಯ ನಡೆಯುತ್ತಿದ್ದ ಇಲ್ಲಿನ ನವಾಬ್‌ ಅಕ್ಬರ್‌ ಬುಗ್ತಿ ಕ್ರೀಡಾಂಗಣದ ಬಳಿ ಬಾಂಬ್‌ ಸ್ಫೋಟಗೊಂಡಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ.

ಬಾಂಬ್‌ ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆಯೇ ಪಂದ್ಯವನ್ನು ಕೆಲಹೊತ್ತು ಸ್ಥಗಿತಗೊಳಿಸಲಾಯಿತು.

ADVERTISEMENT

‘ಮುನ್ನೆಚ್ಚರಿಕೆ ಕ್ರಮವಾಗಿ ಡ್ರೆಸಿಂಗ್‌ ಕೊಠಡಿಗೆ ತೆರಳುವಂತೆ ಆಟಗಾರರಿಗೆ ಸೂಚಿಸಲಾಯಿತು. ಪಂದ್ಯವನ್ನು ಕೆಲಹೊತ್ತು ನಿಲ್ಲಿಸಲಾಯಿತು. ಆಟಗಾರರ ಸುರಕ್ಷತೆಯನ್ನು ಖಾತರಿಪಡಿಸಿದ ಬಳಿ ಪಂದ್ಯ ಮುಂದುವರಿಸಲಾಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ಪಿಎಸ್‌ಎಲ್‌ನ ಪಂದ್ಯವನ್ನು ಕ್ವೆಟ್ಟಾದಲ್ಲೂ ಆಯೋಜಿಸಬೇಕು ಎಂಬುದು ಬಲೂಚಿಸ್ತಾನದ ಕ್ರಿಕೆಟ್‌ ಪ್ರೇಮಿಗಳ ಆಗ್ರಹವಾಗಿದೆ. ಇದರಿಂದ ಪಿಸಿಬಿಯು ಕ್ವೆಟ್ಟಾ ಗ್ಲ್ಯಾಡಿಯೇಟರ್ಸ್‌ ಮತ್ತು ಪೆಶಾವರ ಝಲ್ಮಿ ತಂಡಗಳ ನಡುವೆ ಇಲ್ಲಿ ಪ್ರದರ್ಶನ ಪಂದ್ಯ ಏರ್ಪಡಿಸಿತ್ತು. ಪಂದ್ಯ ವೀಕ್ಷಿಸಲು ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು.

ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ ಸಂಘಟನೆಯು ಸ್ಫೋಟದ ಹೊಣೆ ಹೊತ್ತುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.