ADVERTISEMENT

ಬೂಮ್ರಾ, ಮಂದಾನಾಗೆ ‘ವಿಸ್ಡನ್‌ ಇಂಡಿಯಾ ವರ್ಷದ ಕ್ರಿಕೆಟಿಗರು’ ಪ್ರಶಸ್ತಿ

ಜಿ.ಆರ್‌.ವಿಶ್ವನಾಥ್‌ಗೆ ‘ಹಾಲ್‌ ಆಫ್‌ ಫೇಮ್‌’ ಗೌರವ

ಪಿಟಿಐ
Published 25 ಅಕ್ಟೋಬರ್ 2019, 18:40 IST
Last Updated 25 ಅಕ್ಟೋಬರ್ 2019, 18:40 IST
ಬೂಮ್ರಾ
ಬೂಮ್ರಾ   

ಬೆಂಗಳೂರು: ಭಾರತ ಅಗ್ರಮಾನ್ಯ ವೇಗಿ ಜಸ್‌ಪ್ರೀತ್‌ ಬೂಮ್ರಾ ಮತ್ತು ಬ್ಯಾಟ್ಸ್‌ವುಮನ್‌ ಸ್ಮೃತಿ ಮಂದಾನಾ ಅವರು ಶುಕ್ರವಾರ ಘೋಷಣೆಯಾದ ‘ವಿಸ್ಡನ್‌ ಇಂಡಿಯಾ ಅಲ್ಮನಾಕ್‌ ವರ್ಷದ ಕ್ರಿಕೆಟಿಗರು’ ಗೌರವಕ್ಕೆ ಪಾತ್ರರಾದ ಭಾರತೀಯರಾಗಿದ್ದಾರೆ. ಒಟ್ಟು ಐವರಿಗೆ ಈ ಸಾಲಿನ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಪಾಕಿಸ್ತಾನದ ಫಖ್ರ್‌ ಜಮಾನ್‌, ಶ್ರೀಲಂಕಾದ ದಿಮುತ್‌ ಕರುಣಾರತ್ನೆ ಮತ್ತು ಅಫ್ಗಾನಿಸ್ತಾನದ ಸ್ಪಿನ್‌ ನಿಪುಣ ರಶೀದ್‌ ಖಾನ್‌ ಅವರು ಈ ಗೌರವಕ್ಕೆ ಪಾತ್ರರಾದ ಇತರ ಮೂವರು.

ಮಂದನಾ ಈ ಪ್ರಶಸ್ತಿ ಪಡೆದ ಮೂರನೇ ಆಟಗಾರ್ತಿ ಎನಿಸಿದ್ದಾರೆ. ಮಿತಾಲಿ ರಾಜ್‌ ಮತ್ತು ದೀಪ್ತಿ ಶರ್ಮಾ ಮೊದಲ ಇಬ್ಬರು.

ADVERTISEMENT

ದೇಶಿಯ ಕ್ರಿಕೆಟ್‌ನಲ್ಲಿ ರನ್‌ಹೊಳೆ ಹರಿಸಿ ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಸಾಧನೆಗಾಗಿ ಮಯಂಕ್‌ ಅಗರವಾಲ್‌ ಅವರು ಏಳನೇ ವರ್ಷದ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶ್ವನಾಥ್‌ಗೆ ‘ಹಾಲ್‌ ಆಫ್‌ ಫೇಮ್‌’

ಹಿರಿಯ ಆಟಗಾರರಾದ ಗುಂಡಪ್ಪ ವಿಶ್ವನಾಥ್‌ ಮತ್ತು ಲಾಲಾ ಅಮರನಾಥ್‌ ಅವರಿಗೆ ‘ವಿಸ್ಡನ್‌ ಇಂಡಿಯಾ ಹಾಲ್‌ ಆಫ್‌ ಫೇಮ್‌’ ಗೌರವ ನೀಡಲಾಗಿದೆ.

ಪ್ರಶಾಂತ್‌ ಕಿಡಂಬಿ ಅವರು ಬರೆದ ‘ದಿ ಅನ್‌ಟೋಲ್ಡ್‌ ಹಿಸ್ಟರಿ ಆಫ್‌ ದಿ ಫರ್ಸ್ಟ್‌ ಆಲ್‌ ಇಂಡಿಯಾ ಟೀಮ್‌’ಅನ್ನು ವಿಸ್ಡನ್‌ ಇಂಡಿಯಾ ವರ್ಷದ ಕೃತಿಗೆ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.