ಬುಲಾವಯೊ, ಜಿಂಬಾಬ್ವೆ: ವೇಗದ ಬೌಲರ್ ಕಾರ್ಬಿನ್ ಬಾಷ್ (43ಕ್ಕೆ 5) ಅವರ ಅಮೋಘ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಜಿಂಬಾಬ್ವೆ ತಂಡದ ಮೇಲೆ 328 ರನ್‌ಗಳ ಭಾರಿ ಜಯಪಡೆಯಿತು.
ಕೇವಲ ಎರಡನೇ ಟೆಸ್ಟ್ ಆಡುತ್ತಿರುವ ಬಾಷ್, ದಕ್ಷಿಣ ಆಫ್ರಿಕಾ ತಂಡದ ಮೊದಲ ಇನಿಂಗ್ಸ್‌ನಲ್ಲಿ ಅಜೇಯ 100 ರನ್ ಗಳಿಸಿದ್ದರು. ಒಂದೇ ಪಂದ್ಯದಲ್ಲಿ ಶತಕ ಮತ್ತು ಇನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ ಎಂಬ ಗೌರವ ಅವರದಾಯಿತು.
ಗೆಲ್ಲಲು 537 ರನ್ ಗುರಿ ಎದುರಿಸಿದ್ದ ಜಿಂಬಾಬ್ವೆ ತಂಡ (ಮೂರನೇ ದಿನದ ಕೊನೆಗೆ:32ಕ್ಕೆ1) ನಾಲ್ಕನೇ ದಿನ 208 ರನ್‌ಗಳಿಗೆ ಆಲೌಟ್ ಆಯಿತು.
ಪದಾರ್ದಣೆ ಪಂದ್ಯದ ಇನಿಂಗ್ಸ್‌ನಲ್ಲಿ 153 ರನ್ ಹೊಡೆದ ಲುಹಾನ್‌ಡ್ರೆ ಪ್ರಿಟೋರಿಯಸ್ ಪಂದ್ಯದ ಆಟಗಾರ ಎನಿಸಿದರು.
ಟೆಸ್ಟ್ ಚಾಂಪಿಯನ್‌ಷಿಪ್ ಗೆದ್ದ ತಂಡದಲ್ಲಿದ್ದ ನಾಲ್ವರು ಮಾತ್ರ ಇಲ್ಲಿ ಆಡಿದ್ದರು. ಈ ಪಂದ್ಯ ಹೊಸ ಚಾಂಪಿಯನ್‌ಷಿಪ್ ಆವೃತ್ತಿಯ ಲೆಕ್ಕಕ್ಕೆ ಬರುವುದಿಲ್ಲ.
ಸಂಕ್ಷಿಪ್ತ ಸ್ಕೋರು:
ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 9ಕ್ಕೆ418 ಡಿಕ್ಲೇರ್ಡ್, ಜಿಂಬಾಬ್ವೆ: 251; ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 369; ಜಿಂಬಾಬ್ವೆ: 66.2 ಓವರುಗಳಲ್ಲಿ 208 (ಸೀನ್ ವಿಲಿಯಮ್ಸ್ 26, ಕ್ರೇಗ್ ಇರ್ವಿನ್ 49, ವೆಲಿಂಗ್ಟನ್ ಮಸಕದ್ಜ 57, ಬ್ಲೆಸಿಂಗ್ ಮುಝರಾಬನಿ ಔಟಾಗದೇ 32; ಕೋಡಿ ಯೂಸುಫ್ 22ಕ್ಕೆ3, ಕಾರ್ಬಿನ್ ಬಾಷ್ 43ಕ್ಕೆ5).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.