ADVERTISEMENT

ದೂರವಾದ ಪತ್ನಿ, ಮಗಳಿಗೆ ₹4 ಲಕ್ಷ ಪರಿಹಾರ ನೀಡಲು ಶಮಿಗೆ ಕೋಲ್ಕತ್ತ ಹೈಕೋರ್ಟ್ ಆದೇಶ

ಪಿಟಿಐ
Published 2 ಜುಲೈ 2025, 19:52 IST
Last Updated 2 ಜುಲೈ 2025, 19:52 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ಕೋಲ್ಕತ್ತ:  ಕ್ರಿಕೆಟಿಗ ಮೊಹಮ್ಮದ್ ಶಮಿ ಅವರು ತಮ್ಮಿಂದ ದೂರವಾದ ಪತ್ನಿ ಮತ್ತು ಮಗಳಿಗೆ ಮಾಸಿಕ ₹ 4 ಲಕ್ಷ ಮಾಸಿಕ ಜೀವನಾಂಶ ನೀಡಬೇಕು ಎಂದು ಕೋಲ್ಕತ್ತ ಹೈಕೋರ್ಟ್ ನಿರ್ದೇಶಿಸಿದೆ.

2014ರಲ್ಲಿ ಶಮಿ ಮತ್ತು ಹಸೀನ್ ಜಹಾನ್ ಅವರು ಮದುವೆಯಾಗಿದ್ದರು. ಆದರೆ, 2018ರಲ್ಲಿ ಶಮಿ ಅವರು ತಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಹಸೀನ್ ಅವರು ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿಯಲ್ಲಿ ದೂರು ನೀಡಿದ್ದರು. 

ಎರಡು ವರ್ಷಗಳ ಹಿಂದೆ ಸೆಷನ್ಸ್ ನ್ಯಾಯಾಲಯವು ಪ್ರಕರಣದ ವಿಚಾರಣೆ ನಡೆಸಿ ₹1.30 ಲಕ್ಷ ಮಧ್ಯಂತರ ಜೀವನಾಂಶವನ್ನು ಹಸಿನ್ ಜಹಾನ್ ಅವರಿಗೆ ನೀಡಬೇಕು ಎಂದು ಶಮಿ ಅವರಿಗೆ ಸೂಚಿಸಿತ್ತು. ಆದರೆ ಇದನ್ನು ಒಪ್ಪದ ಜಹಾನ್ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 

ADVERTISEMENT

‘ಶಮಿ ವಿರುದ್ಧದ ಕೌಟುಂಬಿಕ ದೌರ್ಜನ್ಯ ಪ್ರಕರಣ ಇತ್ಯರ್ಧವಾಗುವವರೆಗೆ ಪತ್ನಿಗೆ ₹ 1.50 ಲಕ್ಷ ಮತ್ತು ಮಗಳಿಗೆ ₹ 2.50 ಲಕ್ಷ ಮಾಸಿಕ ಪರಿಹಾರ ನೀಡಬೆಕು’ ಎಂದು ಕೋರ್ಟ್ ಆದೇಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.